ನವದೆಹಲಿ: ತಾಲಿಬಾನ್ ಕಾಬೂಲ್ ಮೇಲೆ ಹಿಡಿತ ಸಾಧಿಸಿದ ನಂತರ ಯಾವುದೇ ಗುಂಡಿನ ಸದ್ದು ಕೇಳಿಲ್ಲ. ಆದರೆ, ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿ ಕೈ ಮೀರುವ ಹಂತದತ್ತ ಸಾಗುತ್ತಿದೆ. ಅನೇಕ ಜನ ತಾಲಿಬಾನ್ ಆಡಳಿತದ ಭಯದಲ್ಲಿ ತಮ್ಮ ತಮ್ಮ ದೇಶಗಳಿಗೆ ಮರಳಲು ಹವಣಿಸುತ್ತಿದ್ದಾರೆ. ಅಲ್ಲದೇ, ಯುದ್ಧದಿಂದ ಹಾನಿಗೊಳಗಾದ ಅಫ್ಘಾನಿಸ್ತಾನದಲ್ಲಿರುವ ನಾಲ್ಕು ಭಾರತೀಯ ಶಿಕ್ಷಕರು ತಕ್ಷಣ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೂವರೂ ಕಾಬೂಲ್‌ನ ಬಖ್ತರ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದರು. 'ನಾವು ಭಾರತದ ಪ್ರತಿಯೊಂದು ಸಂಭವನೀಯ ವೇದಿಕೆಗಳನ್ನು ತಲುಪಿದ್ದೇವೆ ಮತ್ತು ನಮ್ಮ ತಕ್ಷಣದ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಏನನ್ನಾದರೂ ಮಾಡುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ಎರಡು ದಿನಗಳಲ್ಲಿ ಕ್ಯಾಂಪಸ್‌ನಿಂದ ಹೊರಬಂದಿಲ್ಲ ಮತ್ತು ಪ್ರತಿ ಬಾರಿ ಹೊರಗೆ ಗಲಾಟೆ ನಡೆದಾಗ, ಭಯವಾಗುತ್ತದೆ' ಎಂದು ಮೊಹಮ್ಮದ್ ಆಸಿಫ್ ಶಾ ತಿಳಿಸಿದ್ದಾರೆ.
ಓದಿ:ಅಫ್ಘಾನ್‌ನಲ್ಲಿ ತಾಲಿಬಾನ್ 2.0 ಅರಾಜಕತೆ ಶುರು ; ಹಜಾರಾ ನಾಯಕನ ಪ್ರತಿಮೆ ಧ್ವಂಸ