ಕರ್ನಾಟಕ

karnataka

ETV Bharat / bharat

ಅನ್ಯ ಜಾತಿ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಸೊಸೆಯನ್ನೇ ಕೊಂದ - ಉತ್ತರ ಪ್ರದೇಶ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ

ಉತ್ತರ ಪ್ರದೇಶ ಜಿಲ್ಲೆಯಲ್ಲಿ ಮರ್ಯಾದಾ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ.

honour killing
ಮರ್ಯಾದಾ ಹತ್ಯೆ

By

Published : May 7, 2023, 10:55 AM IST

ಸೀತಾಪುರ (ಉತ್ತರ ಪ್ರದೇಶ) :ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ತನ್ನ ಸೊಸೆಯನ್ನೇ ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಆಕೆಯ ಕತ್ತು ಸೀಳಿ ಕೊಲೆಗೈದ ಮರ್ಯಾದಾ ಹತ್ಯೆಯ ಶಂಕಿತ ಪ್ರಕರಣವೊಂದು ಉತ್ತರ ಪ್ರದೇಶದ ಪಿಸಾವನ್ ಪೊಲೀಸ್ ಸರ್ಕಲ್ ವ್ಯಾಪ್ತಿಯ ಬಜನಗರ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸೀತಾಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಎನ್‌ಪಿ ಸಿಂಗ್ ಮಾತನಾಡಿ, "20 ವರ್ಷದ ಯುವತಿಯು ಬಜನಗರ ಗ್ರಾಮದ ರೂಪ ಚಂದ್ರ ಮೌರ್ಯ ಎಂಬುವರನ್ನು ಪ್ರೀತಿಸುತ್ತಿದ್ದಳು. ಮಹಿಳೆಯ ಚಿಕ್ಕಪ್ಪ ಶ್ಯಾಮು ಸಿಂಗ್​ಗೆ ಇವರಿಬ್ಬರ ಸಂಬಂಧದ ಬಗ್ಗೆ ತಿಳಿದಾಗ, ಆಕೆಯನ್ನು ತಂದೆ ಪುಟಾನ್ ಸಿಂಗ್ ತೋಮರ್ ಕೆಲಸ ಮಾಡುತ್ತಿದ್ದ ಗಾಜಿಯಾಬಾದ್‌ಗೆ ಕಳುಹಿಸಿದ್ದರು. ಆದರೆ, ಕೆಲವು ತಿಂಗಳುಗಳ ನಂತರ ಮೌರ್ಯ, ಗಾಜಿಯಾಬಾದ್​ಗೆ ತೆರಳಿದ್ದು, ಅಲ್ಲಿ ಇಬ್ಬರೂ ಓಡಿಹೋಗಿ ಕಳೆದ ವರ್ಷದ ನವೆಂಬರ್‌ನಲ್ಲಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವು ದಿನಗಳ ಬಳಿಕ ಗ್ರಾಮಕ್ಕೆ ಮರಳಿದ್ದು, ಈ ವಿಷಯ ತಿಳಿದ ಶ್ಯಾಮು ಸಿಂಗ್, ಶನಿವಾರ ದಂಪತಿ ವಾಸಿಸುತ್ತಿದ್ದ ಮನೆಗೆ ತೆರಳಿ ಮಹಿಳೆಯನ್ನು ಹೊರಗೆ ಎಳೆದುಕೊಂಡು ಬಂದು ಕುಡುಗೋಲಿನಿಂದ ಆಕೆಯ ಕತ್ತು ಸೀಳಿದ್ದಾನೆ" ಎಂದರು.

ಇದನ್ನೂ ಓದಿ :ಲವ್​ ಮ್ಯಾರೇಜ್​ ಆದ ಮಗಳು.. ವರ್ಷದ ಬಳಿಕ ಅಳಿಯನ ಗುಂಡಿಕ್ಕಿ ಕೊಂದ ಮಾವ!

"ಕೊಲೆ ಬಳಿಕ ಕುಡುಗೋಲಿನೊಂದಿಗೆ ಆರೋಪಿಯು ಮಧ್ಯಾಹ್ನ ಪಿಸಾವನ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಯುವತಿಯು ಓಡಿಹೋಗಿ ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾದ ಕಾರಣ ಅವಳನ್ನು ಕೊಲೆಗೈಯ್ಯಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶ್ಯಾಮು ಸಿಂಗ್‌ನನ್ನು ಬಂಧಿಸಿದ್ದಾರೆ" ಎಂದು ಎನ್‌ಪಿ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ :ಮರ್ಯಾದಾ ಹತ್ಯೆ : ಅಕ್ಕನ ಕತ್ತು ಹಿಸುಕಿ, ಆಕೆಯ ಪ್ರಿಯಕರನಿಗೆ ಗುಂಡಿಕ್ಕಿದ ಅಪ್ರಾಪ್ತ ತಮ್ಮ

ಕಳೆದ ವರ್ಷದ ಆಗಸ್ಟ್​ ತಿಂಗಳಿನಲ್ಲಿ ಸಹ ಇಂತಹ ಪ್ರಕರಣ ಬೆಳಕಿಗೆ ಬಂದಿತ್ತು. ಮಹಾರಾಷ್ಟ್ರದ ಜಲಗಾಂವ್​ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆ ನಡೆದಿತ್ತು. ಅಪ್ರಾಪ್ತ ವಯಸ್ಸಿನ ಸಹೋದರನೊಬ್ಬ ತನ್ನ ಅಕ್ಕನನ್ನು ಕತ್ತು ಹಿಸುಕಿ ಹಾಗೂ ಆಕೆಯ ಪ್ರಿಯಕರನನ್ನು ಗುಂಡಿಕ್ಕಿ ಕೊಂದಿದ್ದು, ನಂತರ ಆರೋಪಿಯು ತನ್ನ ಸ್ವಂತ ಪಿಸ್ತೂಲ್‌ನೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿದ್ದನು. ಮೃತರು ರಾಕೇಶ್ ಸಂಜಯ್ ರಜಪೂತ್ (22) ಮತ್ತು ವರ್ಷಾ ಸಾಧನ್ ಕೋಲಿ (20). ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಓಡಿ ಹೋಗಿ ಮದುವೆಯಾಗಲು ಪ್ರಯತ್ನಿಸುತ್ತಿದ್ದರು. ಈ ವಿಷಯ ತಿಳಿದ ಸಹೋದರ ಮೊದಲು ರಾಕೇಶ್​ಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ನಂತರ ಸಹೋದರಿಯನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದರು.

ಇದನ್ನೂ ಓದಿ :ಅಪ್ರಾಪ್ತೆ-ಯುವಕನ ಪ್ರೇಮಕಹಾನಿ : ಒಂದು ಮಾಡುವುದಾಗಿ ಕರೆದೊಯ್ದು ಕೊಂದು ನದಿಗೆಸೆದರು.. ಮತ್ತೊಂದು ಮರ್ಯಾದಾ ಹತ್ಯೆ?

ABOUT THE AUTHOR

...view details