ನವದೆಹಲಿ: ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿದ್ದು ಮಂಗಳವಾರದಿಂದ ಮೇ 3 ರವರೆಗೆ ಭಾರತದೊಂದಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ವಿಮಾನಗಳ ಹಾರಾಟವನ್ನು ಹಾಂಗ್‌ಕಾಂಗ್ ಸ್ಥಗಿತಗೊಳಿಸಿದೆ.
ಭಾರತ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಗಳಿಗೂ ಈ ನಿಯಮ ಅನ್ವಯಿಸಲಿದೆ. ಈ ತಿಂಗಳಿನಲ್ಲಿ ಎರಡು ವಿಸ್ಟಾರಾ ವಿಮಾನಗಳ 50 ಪ್ರಯಾಣಿಕರಲ್ಲಿ ಕೋವಿಡ್ ಪಾಸಿಟಿವ್ ಕಂಡುಬಂದ ನಂತರ ಅಲ್ಲಿನ ಆಡಳಿತ ಎಚ್ಚೆತ್ತುಕೊಂಡಿದೆ.
ಹೊಸ ನಿಯಮದ ಪ್ರಕಾರ, ಮೇಲೆ ತಿಳಿಸಿದ ರಾಷ್ಟ್ರಗಳನ್ನು ಹೊರತುಪಡಿಸಿ ಇತರ ದೇಶಗಳಿಂದ ಹಾಂಕ್ ಕಾಂಗ್ಗೆ ತೆರಳುವವರು ಪ್ರಯಾಣಕ್ಕೆ 72 ಗಂಟೆಗಳ ಮೊದಲು ಮಾಡಿದ ಆರ್ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರಬೇಕು.