ಕರ್ನಾಟಕ

karnataka

ETV Bharat / bharat

ಹನಿಟ್ರ್ಯಾಪ್​ ಕೇಸ್​ : ಮಧ್ಯಪ್ರದೇಶ ಮಾಜಿ ಸಿಎಂ ಕಮಲ್​ನಾಥ್​ಗೆ ಎಸ್​ಐಟಿ ನೋಟಿಸ್​ - ಕಮಲ್​ನಾಥ್​ಗೆ ಎಸ್​ಐಟಿ ನೋಟಿಸ್​

ಈ ಹನಿಟ್ರ್ಯಾಪ್ ದೂರನ್ನು ಆಧರಿಸಿ ಇಂದೋರ್ ಪೊಲೀಸ್ ಹಾಗೂ ಮಧ್ಯಪ್ರದೇಶದ ಎಟಿಎಸ್‌ ತಂಡ ಮನೆಯೊಂದರ ಮೇಲೆ ದಾಳಿ ನಡೆಸಿ ಐವರು ಯುವತಿಯರು ಹಾಗೂ ಒಬ್ಬ ಪುರುಷನನ್ನು ಬಂಧಿಸಿದ್ದರು. ಅವರ ಮನೆ ಶೋಧಿಸಿದಾಗ ಸಾಕಷ್ಟು ಆಡಿಯೋ, ವಿಡಿಯೋ ದೃಶ್ಯ ಲಭ್ಯವಾಗಿದ್ದವು..

notice
notice

By

Published : May 30, 2021, 5:23 PM IST

ಮಧ್ಯಪ್ರದೇಶ :2019 ರಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣ ಸಂಬಂಧ ಮಾಜಿ ಸಿಎಂ ಕಮಲ್​ನಾಥ್​ ಅವರನ್ನು ಇದೇ ಜೂನ್​ 2ರಂದು ಎಸ್‌ಐಟಿ ವಿಚಾರಣೆಗೊಳಪಡಿಸಲಿದೆ.

ರಾಜ್ಯದ ಹನಿಟ್ರ್ಯಾಪ್ ಪ್ರಕರಣದ ತನಿಖೆಯ ಬೆಂಕಿಯ ಬಿಸಿ ಈಗ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ತಟ್ಟಿದೆ. ಕಮಲ್ ನಾಥ್ ಕೆಲವು ದಿನಗಳ ಹಿಂದೆ ಅವರೊಂದಿಗೆ ಪೆನ್ ಡ್ರೈವ್ ಕುರಿತು ಹೇಳಿಕೆ ಪ್ರಸ್ತಾಪಿಸಿದ್ದರು.

ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅವರಿಗೆ ನೋಟಿಸ್ ಕಳುಹಿಸಿದ್ದು, ಅವರನ್ನು ಜೂನ್ 2 ರಂದು ವಿಚಾರಣೆ ನಡೆಸಲಾಗುವುದು.

ಜೂನ್ 2 ರಂದು ಭೋಪಾಲ್‌ನ ಶ್ಯಾಮಲಾ ಬೆಟ್ಟದಲ್ಲಿರುವ ಕಮಲ್ ನಾಥ್ ಅವರ ಮನೆಗೆ ತೆರಳಿ ಅಲ್ಲಿ ವಿಚಾರಣೆ ನಡೆಸುತ್ತಾರೆ. ಅವರ ಹೇಳಿಕೆಯನ್ನು ದಾಖಲಿಸಲಾಗುವುದು. ಮತ್ತು ಪೆನ್ ಡ್ರೈವ್ ತೆಗೆದುಕೊಳ್ಳುತ್ತಾರೆ ಎಂದು ಎಸ್​ಐಟಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

2019ರಲ್ಲಿ ಮಧ್ಯಪ್ರದೇಶ ರಾಜ್ಯದಲ್ಲಿ ಹನಿಟ್ರ್ಯಾಪ್ ಘಟನೆಗಳು ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಹರ್ಭಜನ್ ಸಿಂಗ್ ಎಂಬಾತನ ಮೇಲೂ ಹನಿಟ್ರ್ಯಾಪ್ ನಡೆಸಿದ್ದ ಯುವತಿ ಹಾಗೂ ತಂಡ ನಂತರ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದರು.

ಈ ಹನಿಟ್ರ್ಯಾಪ್ ದೂರನ್ನು ಆಧರಿಸಿ ಇಂದೋರ್ ಪೊಲೀಸ್ ಹಾಗೂ ಮಧ್ಯಪ್ರದೇಶದ ಎಟಿಎಸ್‌ ತಂಡ ಮನೆಯೊಂದರ ಮೇಲೆ ದಾಳಿ ನಡೆಸಿ ಐವರು ಯುವತಿಯರು ಹಾಗೂ ಒಬ್ಬ ಪುರುಷನನ್ನು ಬಂಧಿಸಿದ್ದರು. ಅವರ ಮನೆ ಶೋಧಿಸಿದಾಗ ಸಾಕಷ್ಟು ಆಡಿಯೋ, ವಿಡಿಯೋ ದೃಶ್ಯ ಲಭ್ಯವಾಗಿದ್ದವು.

ಎಸ್‌ಐಟಿ ನಡೆಸಿದ ತನಿಖೆಯಲ್ಲಿ ಹನಿಟ್ರ್ಯಾಪ್ ಬಲೆಯಲ್ಲಿ ಮಧ್ಯಪ್ರದೇಶದ ಪ್ರಭಾವಿ ಅಧಿಕಾರಿಗಳು ಹಾಗೂ ರಾಜಕಾರಣಿಗಳೂ ಸಿಲುಕಿದ್ದಾರೆ ಎಂಬ ಸುದ್ದಿ ಹೊರಬಿದ್ದು ಸಂಚಲನ ಮೂಡಿಸಿತ್ತು.

ಹನಿಟ್ರ್ಯಾಪ್‌ ತನಿಖೆ ವೇಳೆ ಹೊರಬಂದ ಮಾಹಿತಿಯಿಂದಾಗಿ ಆಗಿನ ಸಿಎಂ ಕಮಲ್‌ ನಾಥ್‌ ಸರ್ಕಾರವೇ ನಡುಗಿ ಎಸ್‌ಐಟಿ ಮುಖ್ಯಸ್ಥರನ್ನೇ ಬದಲಾಯಿಸಿತ್ತು.

ಎಸ್‌ಐಟಿ ರಚನೆಯಾದ ನಂತರ ಎಸ್‌ಐಟಿ ಮುಖ್ಯಸ್ಥರನ್ನು ಮೂರು ಬಾರಿ ಬದಲಾಯಿಸಲಾಯಿತು.ಶ್ರೀನಿವಾಸ್ ವರ್ಮಾ ಅವರನ್ನು ಮೊದಲು ಎಸ್‌ಐಟಿಯಾಗಿ ನೇಮಿಸಲಾಯಿತು ಮತ್ತು ನಂತರ ರಾಜೇಂದ್ರ ಕುಮಾರ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಯಿತು.

ಈ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿ ಕೂಡ ಸಲ್ಲಿಸಲಾಗಿದ್ದು, ಎಸ್‌ಐಟಿ ಮುಖ್ಯಸ್ಥರನ್ನು ಬದಲಾಯಿಸುವ ಬಗ್ಗೆ ನ್ಯಾಯಾಲಯ ಪದೇ ಪದೆ ಅಸಮಾಧಾನ ವ್ಯಕ್ತಪಡಿಸಿ, ಬಳಿಕ ಎಸ್‌ಐಟಿಯ ಯಾವುದೇ ಅಧಿಕಾರಿಯನ್ನೂ ಬದಲಾಯಿಸದಂತೆ ಸೂಚಿಸಿತ್ತು. ಈ ಪ್ರಕರಣದಲ್ಲಿ ಅನೇಕ ಅಧಿಕಾರಿ ರಾಜಕಾರಣಿಗಳು ಮತ್ತು ಪತ್ರಕರ್ತರ ಸಂಶಯಾಸ್ಪದ ಪಾತ್ರವೂ ಮುನ್ನೆಲೆಗೆ ಬಂದಿತು.

ಅಂದಿನಿಂದ ಇಂದಿನವರೆಗೂ ಈ ವಿಷಯದಲ್ಲಿ ಯಾವುದೇ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳದಿದ್ದರೂ ಇಡೀ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿ ಜಬಲ್ಪುರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು.

ಮಧ್ಯಪ್ರದೇಶದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ, ಈ ಪ್ರಕರಣ ಅಲ್ಲಿಗೆ ನಿಂತಿತ್ತು. ಇದೀಗ ಮತ್ತೆ ಮುನ್ನಲೆಗೆ ಬಂದಿದೆ.

ABOUT THE AUTHOR

...view details