ಕರ್ನಾಟಕ

karnataka

ETV Bharat / bharat

ಪಾಕಿಸ್ತಾನದ ಐಎಸ್​ಐನಿಂದ ಹನಿ ಟ್ರ್ಯಾಪ್​ಗೆ ಒಳಗಾಗಿದ್ದ ಯೋಧನ ಬಂಧನ - Honey trapped soldier held in Rajasthan for spying charges

ಪಾಕಿಸ್ತಾನದ ಐಎಸ್‌ಐನ ಏಜೆಂಟರಿಂದ ಹನಿಟ್ರ್ಯಾಪ್​ಗೆ ಒಳಗಾಗಿದ್ದು, ಈ ವೇಳೆ ದೇಶದ ರಹಸ್ಯ ಮಾಹಿತಿ ಹಂಚಿಕೊಂಡ ಯೋಧನನ್ನು ರಾಜಸ್ಥಾನ ಪೊಲೀಸರ ಗುಪ್ತಚರ ಘಟಕ ಬಂಧಿಸಿದೆ.

Honey trapped soldier held in Rajasthan for spying charges
ಪಾಕಿಸ್ತಾನದ ಐಎಸ್​ಐನಿಂದ ಹನಿ ಟ್ರ್ಯಾಪ್​ಗೆ ಒಳಗಾಗಿದ್ದ ಯೋಧನ ಬಂಧನ

By

Published : Mar 14, 2021, 10:59 AM IST

ಜೈಪುರ:ಭಾರತೀಯ ಸೇನೆಯ ಬಗ್ಗೆ ಗೌಪ್ಯ ಮತ್ತು ಕಾರ್ಯತಂತ್ರದ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಪಾಕಿಸ್ತಾನದ ಐಎಸ್‌ಐನ ಏಜೆಂಟರಿಂದ ಹನಿ ಟ್ರ್ಯಾಪ್​ಗೆ ಒಳಗಾಗಿದ್ದ ಸೈನಿಕನನ್ನು ರಾಜಸ್ಥಾನ ಪೊಲೀಸರ ಗುಪ್ತಚರ ಘಟಕ ಶನಿವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ಲಕ್ಷ್ಮನ್‌ಗಢದ ಆಕಾಶ್ ಮೆಹ್ರಿಯಾ ಬಂಧಿತನೆಂದು ಗುರುತಿಸಲಾಗಿದೆ. ಈತ ಹನಿಟ್ರ್ಯಾಪ್​ಗೆ ಒಳಗಾಗಿದ್ದು, ಈ ವೇಳೆ ದೇಶದ ರಹಸ್ಯ ಮಾಹಿತಿ ಹಂಚಿಕೊಂಡ ಪ್ರಕರಣದಲ್ಲಿ ಬಂಧಿಸಲಾಗಿದೆ. ಮೆಹ್ರಿಯಾ 2018 ರಲ್ಲಿ ಭಾರತೀಯ ಸೇನೆ ಸೇರ್ಪಡೆಗೊಂಡರು ಮತ್ತು 2019 ರಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದರು. ಮೆಹ್ರಿಯಾ ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಮಹಿಳಾ ಏಜೆಂಟ್​ ಸಂಪರ್ಕದಲ್ಲಿದ್ದರು ಮತ್ತು ಭಾರತೀಯ ಸೇನೆಯ ಬಗ್ಗೆ ಗೌಪ್ಯ ಮಾಹಿತಿಯನ್ನು ಆಕೆಗೆ ರವಾನಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ತಿರುಪತಿಯಲ್ಲಿ ಅಪಹರಣಗೊಂಡಿದ್ದ ಛತ್ತೀಸ್‌ಗಡದ ಬಾಲಕನನ್ನು ರಕ್ಷಿಸಿದ ಪೊಲೀಸರು

ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹನಿಟ್ರ್ಯಾಪ್​ಗೆ ಒಳಗಾಗಿದ್ದ ಆರೋಪಿ ಹಣಕ್ಕೆ ಬದಲಾಗಿ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರೆಂದು ತಿಳಿದುಬಂದಿದೆ. ಪಾಕಿಸ್ತಾನದ ಮಹಿಳಾ ಏಜೆಂಟ್​ ಜತೆ ಅಶ್ಲೀಲ ಚಾಟ್ ಮಾಡಿದ್ದಾರೆ. ಆದ್ದರಿಂದ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details