ಅಹಮದ್‌ನಗರ(ಮಹಾರಾಷ್ಟ್ರ):ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಯುವಕ-ಯುವತಿಯರು ಮೋಸ ಹೋಗುವ ಪ್ರಕರಣಗಳ ಬಗ್ಗೆ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದ್ರೆ ಕೋತಿಗಳು ಸಹ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿರುವುದನ್ನು ಕೇಳಿಯೂ ಇಲ್ಲ, ನೋಡಿಯೂ ಇಲ್ಲವಲ್ವಾ?. ಆದ್ರೆ ಮಹಾರಾಷ್ಟ್ರದ ಅಹಮದ್ನಗರದಲ್ಲಿ ಗಂಡು ಕೋತಿಯ ಸೆರೆ ಹಿಡಿಯಲು ಅಧಿಕಾರಿಗಳು ಹನಿಟ್ರ್ಯಾಪ್ ಮಾಡಿದ್ದಾರೆ. ಅದಕ್ಕೋಸ್ಕರ ಹೆಣ್ಣು ಕೋತಿಯ ಬಳಕೆ ಮಾಡಿಕೊಂಡಿದ್ದಾರೆ.
ಗಂಡು ಕೋತಿ ಬಂಧನಕ್ಕೆ ಹನಿಟ್ರ್ಯಾಪ್.. ಹೆಣ್ಣು ಮಂಗನ ಆಮಿಷ ತೋರಿಸಿ ಸೆರೆ - ಹನಿಟ್ರ್ಯಾಪ್ ಜಾಲ
ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದ ಕೋತಿಯನ್ನು ಸೆರೆಹಿಡಿಯಲು ಹನಿಟ್ರ್ಯಾಪ್ ತಂತ್ರ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಏನಿದು ಘಟನೆ?:ಅಹಮದ್ನಗರದ ಸಕುರ್ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಗಂಡು ಮಂಗವೊಂದು ಸಿಕ್ಕಾಪಟ್ಟೆ ಆತಂಕ ಸೃಷ್ಟಿಸಿತ್ತು. ಗ್ರಾಮದ 25ಕ್ಕೂ ಹೆಚ್ಚಿನ ಜನರ ಮೇಲೆ ದಾಳಿ ನಡೆಸಿ, ಗಾಯಗೊಳಿಸಿತ್ತು. ಮೊನ್ನೆ ಸಂಜೆ ಕೂಡ ಇಬ್ಬರು ಬಾಲಕಿಯರ ಮೇಲೆ ದಾಳಿ ನಡೆಸಿ, ಗಂಭೀರವಾಗಿ ಗಾಯಗೊಳಿಸಿತ್ತು. ಇದರ ಬಗ್ಗೆ ಅರಣ್ಯ ಸಿಬ್ಬಂದಿ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಈ ಕೋತಿಯ ಬಂಧನಕ್ಕೆ ಅರಣ್ಯ ಸಿಬ್ಬಂದಿ ಇಲಾಖೆ ಪ್ರಯತ್ನಿಸಿ ವಿಫಲರಾಗಿದ್ರು.
ಸುಮಾರು ದಿನಗಳ ಕಾಲ ಪ್ರಯತ್ನದ ಬಳಿಕ ಕೂಡ ಕೋತಿ ಸೆರೆಯಾಗಿರಲಿಲ್ಲ. ಹೀಗಾಗಿ, ಬೇರೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಗಂಡು ಕೋತಿ ಓಡಾಡುತ್ತಿದ್ದ ಜಾಗದಲ್ಲಿ ಹೆಣ್ಣು ಮಂಗವೊಂದನ್ನು ತಂದುಬಿಟ್ಟಿದ್ದಾರೆ. ಹೀಗಾಗಿ, ಅದರ ಆಮಿಷಕ್ಕೊಳಗಾಗಿ ಗಂಡು ಕೋತಿ ಆಗಮಿಸಿದೆ. ಈ ವೇಳೆ ಅರಣ್ಯ ಸಿಬ್ಬಂದಿ ಅದನ್ನು ಸೆರೆ ಹಿಡಿದಿದ್ದಾರೆ. ಅರಣ್ಯಾಧಿಕಾರಿಗಳ ವಿಶಿಷ್ಟ ಪ್ಲಾನ್ನಿಂದಾಗಿ ಕೋತಿ ಸೆರೆ ಸಿಕ್ಕಿದ್ದು, ಇದರಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ.