ಹೈದಾರಾಬಾದ್ : ದೇಶದಲ್ಲಿನ ಗ್ರೀನ್ ಇಂಡಿಯಾ ಚಾಲೆಂಜ್‌ಗೆ ಕೈಜೋಡಿಸಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಇಂದು ಹೈದಾರಾಬಾದ್‌ನ ರಾಜಭವನದ ಆವರಣದಲ್ಲಿ ಸಸಿ ನೆಡುವ ಮೂಲಕ ಹಸಿರು ಭಾರತದ ಸವಾಲನ್ನು ಸ್ವೀಕರಿಸಿದರು. ಮಾತ್ರವಲ್ಲದೆ, ಪರಿಸರ ವ್ಯವಸ್ಥೆಗೆ ಕರೆ ನೀಡಿದರು. ರಾಜ್ಯಸಭಾ ಸದಸ್ಯ ಜೆ.ಸಂತೋಶ್ ಕುಮಾರ್ ಗ್ರೀನ್ ಇಂಡಿಯಾ ಚಾಲೆಂಜ್ ನೀಡಿದ್ದಾರೆ.
ಸಿಜೆಐ ಎನ್‌ವಿ ರಮಣ ಸಸಿ ನೆಟ್ಟ ಬಳಿಕ ಸುಪ್ರೀಂಕೋರ್ಟ್‌ನ ಎಲ್ಲಾ ನ್ಯಾಯಾಮೂರ್ತಿಗಳು, ಹೈಕೋರ್ಟ್‌ಗಳ ಸಿಜೆಗಳು, ನ್ಯಾಯಮೂರ್ತಿಗಳು ಹಾಗೂ ಇತರೆ ನ್ಯಾಯಾಲಯಗಳ ನ್ಯಾಯಾಧೀಶರು ಸಸಿ ನೆಡುವಂತೆ ಕರೆ ನೀಡಿದರು. ದೇಶವನ್ನು ಹಸರೀಕರಣಗೊಳಿಸುವ ಹಿನ್ನೆಲೆಯಲ್ಲಿ ಗ್ರೀನ್ ಇಂಡಿಯಾ ಚಾಲೆಂಜ್ ನೀಡಲಾಗಿದೆ.
ಇದನ್ನೂ ಓದಿ: WTC ಫೈನಲ್ಗೆ ಭಾರತ ತಂಡ ಪ್ರಕಟ : 15ರ ಬಳಗದಲ್ಲಿ ಕನ್ನಡಿಗರಿಗಿಲ್ಲ ಅವಕಾಶ
ಯಡಾದ್ರಿಯ ಪ್ರಸಿದ್ಧ ನರಸಿಂಹ ಸ್ವಾಮಿ ದೇವಾಲಯಕ್ಕೆ ಸಿಜೆಐ ಭೇಟಿ
ತೆಲಂಗಾಣ ಪ್ರವಾಸದಲ್ಲಿರುವ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್‌ವಿ ರಮಣ ಇಂದು ಹೈದಾರಾಬಾದ್‌ನಿಂದ 60 ಕಿಲೋಮೀಟರ್ ದೂರದಲ್ಲಿರುವ ಯಡಾದ್ರಿಯ ಪ್ರಸಿದ್ಧ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸಿಜೆಐ ರಮಣ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ, ಅಧಿಕಾರಿಗಳು ಸಾಂಪ್ರದಾಯಿಕ ಸ್ವಾಗತ ಕೋರಿದರು. ತೆಲಂಗಾಣದ ಕಾನೂನು ಸಚಿವ ಎ.ಇಂದ್ರಾಕರನ್ ರೆಡ್ಡಿ ಮತ್ತು ಇತರೆ ನಾಯಕರು ಉಪಸ್ಥಿತರಿದ್ದರು.
2014ರಲ್ಲಿ ಆಂಧ್ರಪ್ರದೇಶದಿಂದ ತೆಲಂಗಾಣ ಇಬ್ಭಾಗವಾದ ನಂತರ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನೇತೃತ್ವದ ಟಿಆರ್‌ಎಸ್ ಸರ್ಕಾರ ದೇವಸ್ಥಾನವನ್ನು ನವೀಕರಣಗೊಳಿಸಿದೆ. ನ್ಯಾಯಮೂರ್ತಿ ಎನ್‌ವಿ ರಮಣ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದಾರೆ.