ಅಲಿಗಢ್:ಇಬ್ಬರು ಹುಡುಗಿಯರ ವಿಶಿಷ್ಟ ಪ್ರೇಮಕಥೆ ಬೆಳಕಿಗೆ ಬಂದಿದೆ. ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭೇಟಿಯಾದ ನಂತರ ಇಬ್ಬರ ನಡುವೆ ಪ್ರೀತಿ ಬೆಳದಿದ್ದು, ಇಬ್ಬರು ಒಂದಾಗಿ ಬಾಳುವುದಾಗಿ ಪ್ರತಿಜ್ಞೆ ಮಾಡಿದರು. ಆದರೆ, ಇವರ ಪ್ರೇಮ ಪುರಾಣಕ್ಕೆ ಕುಟುಂಬವು ನಿರಾಕರಿಸಿ ಯುವತಿಗೆ ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹುಟ್ಟುಹಬ್ಬದಲ್ಲಿ ಭಾಗಿ..
ಇಬ್ಬರು ಯುವತಿಯರ ಲವ್ ಪುರಾಣಕ್ಕೆ ಹಿರಿಯರ ಅಡ್ಡಿ ಅಮಾಮದಾಪುರ ಗ್ರಾಮದ ನಿವಾಸಿ ಬಬ್ಲಿ ದೆಹಲಿ ವಿಮಾನ ನಿಲ್ದಾಣದ ಕ್ಯಾಂಟೀನ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ವರ್ಷದ ಹಿಂದೆ, ಸೋದರಳಿಯ ಜನ್ಮದಿನದಂದು ಭಮ್ಸೋಯಿ ಗ್ರಾಮದ ನಿವಾಸಿ ದೀಪಿಕಾ ಅಲಿಯಾಸ್ ಸಲೋನಿಯನ್ನು ಭೇಟಿಯಾಗಿದ್ದರು. ಇದರ ನಂತರ, ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು, ಚಾಟಿಂಗ್ ಮಾಡುವುದು ಮುಂದುವರಿಯುತ್ತ ಇಬ್ಬರು ಮಧ್ಯೆಯ ಸಲುಗೆ ಹೆಚ್ಚಾಗಿ ಪ್ರೀತಿಯಲ್ಲಿ ಬಿದ್ದರು.
ಪ್ರೀತಿಗೆ ವಿರೋಧ..
ಆದರೆ, ಈ ಸಂಬಂಧವನ್ನು ದೀಪಿಕಾ ಕುಟುಂಬವು ಇಷ್ಟಪಡಲಿಲ್ಲ. ದೀಪಿಕಾ ಅವರ ಕುಟುಂಬ ಸದಸ್ಯರು ಕೂಡ ಬಬ್ಲಿಯೊಂದಿಗೆ ಭೇಟಿಯಾಗುವುದನ್ನು ಮತ್ತು ಮಾತನಾಡುವುದನ್ನು ನಿಲ್ಲಿಸಿದರು. ದೀಪಿಕಾ ಬಬ್ಲಿಯೊಂದಿಗೆ ಮಾತನಾಡುವಾಗಲೆಲ್ಲಾ ಆಕೆಯ ಕುಟುಂಬಸ್ಥರು ಹಲ್ಲೆ ಮಾಡುತ್ತಿದ್ದರು.
ಅಮಾನವೀಯ..
ಕೆಲವು ದಿನಗಳ ಹಿಂದೆ ದೀಪಿಕಾ ಫೋನ್ ಮಾಡಿ ನನ್ನ ಮದುವೆಯನ್ನು ಬೇರೆ ಯುವಕನೊಂದಿಗೆ ನಿಗದಿಪಡಿಸಲಾಗಿದೆ, ನನ್ನನ್ನು ದೆಹಲಿಗೆ ಕರೆದುಕೊಂಡು ಹೋಗುವಂತೆ ನನಗೆ ತಿಳಿಸಿದ್ದಳು. ಕೂಡಲೇ ನಾನು ದೆಹಲಿಯಿಂದ ಅಲಿಗಢ್ನ ದೀಪಿಕಾ ಮನಗೆ ತೆರಳಿದೆ. ಅಲ್ಲಿಂದ ಗ್ರಾಮ ಅಧ್ಯಕ್ಷರನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ದೀಪಿಕಾ ಕುಟುಂಬಸ್ಥರು ನನ್ನನ್ನು ಬಂಧಿಸಿ ಮನಸೋಇಚ್ಛೆ ಥಳಿಸಿದರು. ಬಳಿಕ ನನ್ನ ವಿರುದ್ಧ ಅಮಾನವೀಯವಾಗಿ ನಡೆದುಕೊಂಡರು ಎಂದು ಬಬ್ಲಿ ಆರೋಪಿಸಿದ್ದಾರೆ.
ಆಕೆಯನ್ನು ಮನೆಯಲ್ಲಿ ಮೋಸದಿಂದ ಕರೆ ಮಾಡಿ ಈ ಘಟನೆ ನಡೆದಿದೆ ಎಂದು ಬಬ್ಲಿ ಆರೋಪಿಸಿದ್ದಾರೆ. ದೀಪಿಕಾ ಕುಟುಂಬಸ್ಥರಾದ ಜಿತೇಂದ್ರ, ನರೇಶ್, ಸುರೇಶ್, ಸಂಜಯ್ ಮುಂತಾದವರ ಸೇರಿ ನನ್ನನ್ನು ಕೋಣೆಯಲ್ಲಿ ಕೂಡಿ ಹಾಕಿ ಕಟ್ಟಿಗೆಯಿಂದ ಥಳಿಸಿದ್ದಾರೆ. ಗಾಯದ ಮಧ್ಯೆಯೂ ನಾನು ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದೆ. ಆಗ ಪೊಲೀಸ್ ಠಾಣೆಗೆ ಗ್ರಾಮದ ಹಿರಿಯರು ಬಂದರು. ಪೊಲೀಸರು ಈ ಪ್ರಕರಣವನ್ನು ಸಾಧಾರಣ ವಿಭಾಗದಲ್ಲಿ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಐವರು ಬಂಧಿಸಲಾಗಿದ್ದು, ಅದರಲ್ಲಿ ನಾಲ್ವರಿಗೆ ಜಾಮೀನು ಸಿಕ್ಕಿದೆ ಎಂದು ಬಬ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗೆ ಮನವಿ
ಬಾಲಕಿಯರ ಸುರಕ್ಷತೆಯ ವಿಷಯದಲ್ಲಿ ದೀಪಿಕಾ ಸಹಾಯಕ್ಕಾಗಿ ರಾಜ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಬಬ್ಲಿ ಮನವಿ ಮಾಡಿದ್ದಾರೆ. ಯೋಗಿ ಆದಿತ್ಯನಾಥ್‌ಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಆದ್ದರಿಂದ ಯಾವುದೇ ಮಗಳಿಗೆ ಇಂತಹ ಘಟನೆ ಸಂಭವಿಸುವುದಿಲ್ಲ ಎಂದು ಬಬ್ಲಿ ತಿಳಿಸಿದ್ದಾರೆ.