ಹೈದರಾಬಾದ್(ತೆಲಂಗಾಣ): ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದ ಸದ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬೆನ್ನಲ್ಲೇ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿಯಲ್ಲಿ ಬೆಳಕಿಗೆ ಬಂದಿದೆ.
ಹೌದು, ಮಹಾರಾಜಗುಡ ಗ್ರಾಮವು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿಯಲ್ಲಿದೆ. ಈ ಹಳ್ಳಿಯಲ್ಲಿರುವ ವಾಸವಾಗಿರುವ ಕುಟುಂಬದ ಮನೆ ಆರ್ಧ ಮಹಾರಾಷ್ಟ್ರಕ್ಕೆ ಮತ್ತು ಉಳಿದ ಆರ್ಧ ತೆಲಂಗಾಣ ರಾಜ್ಯದ ನಡುವೆ ಹಂಚಿಕೆಯಾಗಿದೆ. 'ನಮ್ಮ ಕುಟುಂಬದಲ್ಲಿ 12-13 ಮಂದಿ ವಾಸಿಸುತ್ತಿದ್ದೇವೆ, ಮನೆಯ 4 ಕೊಠಡಿಗಳು ಮಹಾರಾಷ್ಟ್ರದಲ್ಲಿದ್ದರೆ, 4 ತೆಲಂಗಾಣ ರಾಜ್ಯಕ್ಕೆ ಸೇರಿವೆ. ನನ್ನ ಅಡುಗೆ ಮನೆ ಸಹ ತೆಲಂಗಾಣ ರಾಜ್ಯಕ್ಕೆ ಸ್ಥಳಾಂತರಗೊಂಡಿದೆ' ಎನ್ನುತ್ತಾರೆ ಮಾಲೀಕ ಉತ್ತಮ್ ಪವಾರ್.