ಕರ್ನಾಟಕ

karnataka

ETV Bharat / bharat

ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕಾರ್ನಿವಲ್​ ಸಂಭ್ರಮ.. ಬೇಸಿಗೆ ರಜೆ ಆನಂದಿಸಲು ವಿಶೇಷ ಪ್ಯಾಕೇಜ್​

Ramoji Film City Holiday Carnival.. ಫಿಲ್ಮ್​ ಸಿಟಿ ಅಂದ್ರೆ ಭೂಲೋಕದ ಸ್ವರ್ಗ. ಇಲ್ಲಿಗೆ ಕಾಲಿರಿಸಿದಾಕ್ಷಣ ಯಾವುದೋ ಲೋಕಕ್ಕೆ ಬಂದಿದ್ದನೇನೋ ಎಂಬಂತೆ ಪ್ರತಿಯೊಬ್ಬ ಪ್ರವಾಸಿಗನಿಗೆ ಭಾಸವಾಗದೇ ಇರದು. ಇಲ್ಲಿನ ಸುಂದರ ಉದ್ಯಾನವನಗಳ ಲೋಕಗಳಲ್ಲಿ ವಿಹರಿಸುವುದು, ಕ್ಯಾಂಪಸ್​ನಲ್ಲಿ ಸುತ್ತಾಡುವುದು, ಫಿಲ್ಮ್ ಸಿಟಿಯಲ್ಲಿ ಪ್ಲೇ ಝೋನ್‌ಗಳು, ವಿವಿಧ ರಾಜ್ಯಗಳ ಸಾಂಪ್ರದಾಯಿಕ ನೃತ್ಯಗಳು ಮತ್ತಷ್ಟು ಮೆರಗನ್ನು ನೀಡುತ್ತಿವೆ. ಈ ಸೌಂದರ್ಯ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರ ರಾಮೋಜಿ ಫಿಲಂ ಸಿಟಿ ಸಮ್ಮರ್​ ಆಫರ್​ ನೀಡುತ್ತಿದೆ.

Holiday Carnival at Ramoji Film City, Holiday Carnival at Ramoji Film City to start from April, Ramoji Film City summer offers, Ramoji Film City news, ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಾಲಿಡೇ ಕಾರ್ನೀವಲ್​, ಏಪ್ರಿಲ್​ನಿಂದ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಹಾಲಿಡೇ ಕಾರ್ನೀವಲ್ ಹಬ್ಬ, ರಾಮೋಜಿ ಫಿಲ್ಮ್​ ಸಿಟಿ ಸಮ್ಮರ್​ ಆಫರ್​,  ರಾಮೋಜಿ ಫಿಲ್ಮ್​ ಸಿಟಿ ಸುದ್ದಿ,
ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶುರುವಾಗ್ತಿದೆ ಕಾರ್ನೀವಲ್​ ಹಬ್ಬ

By

Published : Apr 18, 2022, 1:42 PM IST

ಹೈದರಾಬಾದ್​:ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ಇಲ್ಲಿನ ಸೌಂದರ್ಯಕ್ಕೆ ಮನಸೋಲುತ್ತಿದ್ದಾರೆ. ಇಲ್ಲಿನ ಸುಂದರವಾದ ಕಟ್ಟಡಗಳು ಮತ್ತು ಅದ್ಭುತ ದೃಶ್ಯಾವಳಿಗಳ ನಡುವೆ ರಾಮೋಜಿ ಫಿಲಂ ಸಿಟಿ ಈ ಬಾರಿ ಸಮ್ಮರ್​ ಸೀಸನ್​ ಆಫರ್​ನ್ನು ಘೋಷಿಸಿದೆ. ಈ ಹಾಲಿಡೇ ಕಾರ್ನಿವಲ್ ಆಫರ್​ ಬೇಸಿಗೆ ಕಾಲವಾದ​ 21ನೇ ಏಪ್ರಿಲ್​ನಿಂದ ಜೂನ್ 5 ರವರೆಗೆ ನಡೆಯಲಿದೆ. 46 ದಿನಗಳ ಕಾಲ ನಡೆಯುವ ಈ ಆಚರಣೆಯಲ್ಲಿ ಪ್ರೇಕ್ಷಕರು ಉದ್ಯಾನಗಳು, ಲೈವ್ ಶೋಗಳು, ಸಾಹಸ ಪ್ರದರ್ಶನಗಳು, ಮೋಜಿನ ಸವಾರಿಗಳು, ಆಟಗಳು ಮತ್ತು ಭವ್ಯವಾದ ಬಾಹುಬಲಿ ಸೆಟ್​ಗಳನ್ನು ನೋಡಿ ಆನಂದಿಸಬಹುದಾಗಿದೆ.

ಹ್ಯಾಪಿ ಸ್ಟ್ರೀಟ್, ಕಾರ್ನಿವಲ್, ಸಂಜೆ ಫನ್​

  • ಹ್ಯಾಪಿ ಸ್ಟ್ರೀಟ್: ವಿಶೇಷವಾಗಿ ರಜಾ ಕಾಲಕ್ಕಾಗಿ ರಚಿಸಲಾದ ಮೋಜಿನ ಗೇಮ್‌ಗಳು, ಸ್ಟ್ರೀಟ್​ ಶೋಗಳು, ಲೈವ್ ಫುಡ್ ಕೌಂಟರ್‌ಗಳು ಮತ್ತು ಡಿಜೆ ವಿಶೇಷ ಕಾರ್ಯಕ್ರಮಗಳು ನಿಮ್ಮನ್ನು ಆಕರ್ಷಿಸಲಿವೆ.
  • ಕಾರ್ನಿವಲ್​: ಅದ್ಭುತವಾದ ಕಾರ್ನಿವಲ್ ಟ್ಯಾಬ್ಲೋಗಳು ಕನಸಿನ ಮಾರ್ಗಗಳನ್ನು ಹೆಚ್ಚಿಸುತ್ತವೆ. ಈ ವೇಳೆ ನೃತ್ಯಗಾರರು, ಸ್ಟಿಲ್ಟ್ ವಾಕರ್ಸ್, ಜಗ್ಲರ್ಸ್​ ಮತ್ತು ವಿದೂಷಕರು ಪ್ರೇಕ್ಷಕರನ್ನು ಮನರಂಜಿಸಲು ಸಜ್ಜಾಗಿದ್ದಾರೆ.
  • ಸಂಜೆ ಫನ್​: ಸುಂದರವಾದ ಉದ್ಯಾನಗಳು ಮತ್ತು ಇಲ್ಲಿನ ರಸ್ತೆ ಮಾರ್ಗಗಳು ವಿಶೇಷ ಬೆಳಕಿನಲ್ಲಿ ಕಂಗೊಳಿಸುತ್ತವೆ. ಪ್ರವಾಸಿಗರಿಗೆ ಒಂದು ಹೊಸ ಲೋಕಕ್ಕೆ ಬಂದಂತೆ ಅನುಭವವಾಗುತ್ತದೆ. ಹಗಲು ಮತ್ತು ಸಂಜೆ ಭೇಟಿ ನೀಡುವ ಜನರಿಗೆ ವಿವಿಧ ಪ್ಯಾಕೇಜ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
    ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶುರುವಾಗ್ತಿದೆ ಕಾರ್ನಿವಲ್​ ಹಬ್ಬ

ಹಾಲಿಡೇ ಕಾರ್ನಿವಲ್ ಡೇ ಟೂರ್​ ಪ್ಯಾಕೇಜ್​ (ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ):ಈ ಪ್ಯಾಕೇಜ್ ವಿಷಯಾಧಾರಿತ ಆಕರ್ಷಣೆಗಳು, ಹ್ಯಾಪಿ ಸ್ಟ್ರೀಟ್‌ನಲ್ಲಿ ಮೋಜಿನ ಚಟುವಟಿಕೆಗಳು, ಲೈಟ್​ಗಳಲ್ಲಿ ಮಿಂಚುವ ಕಾರ್ನಿವಲ್ ಪರೇಡ್, ಇಲ್ಲಿ ಪ್ರವಾಸಿಗರನ್ನು ಸಂಜೆಯ ವೇಳೆಗೆ ಪುಳಕಿತಗೊಳಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಪ್ರವಾಸಿಗರು ಈ ಸಡಗರ ಸಂಭ್ರಮದಲ್ಲಿ ಮಿಂದೇಳುತ್ತಾರೆ. ಅಷ್ಟೇ ಅಲ್ಲ, ನೃತ್ಯ ತಂಡಗಳು ನೀಡಿದ ಮನರಂಜನೆಯ ಜೊತೆಗೆ ವೀಣೆಗಳ ಸುಮಧುರ ಸಂಗೀತವನ್ನು ಆಸ್ವಾದಿಸುತ್ತಿದ್ದಾರೆ.

ನಾನ್-ಎಸಿ ಬಸ್​ಗಳ ಮೂಲಕ ಅತಿಥಿಗಳನ್ನು ರಾಮೋಜಿ ಫಿಲ್ಮ್ ಸಿಟಿಗೆ ಕರೆತರಲಾಗುತ್ತದೆ. ಪ್ರವಾಸಿಗರು ಸುಂದರ ಲೋಕದಲ್ಲಿರುವ ಶೂಟಿಂಗ್ ಸ್ಥಳಗಳು ಮತ್ತು ಗಾರ್ಡನ್‌ಗಳು, ರಾಮೋಜಿ ಮೂವಿ ಮ್ಯಾಜಿಕ್ ಪ್ರದರ್ಶನ, ಆ್ಯಕ್ಷನ್ ಥಿಯೇಟರ್, ಸ್ಪೇಸ್ ಯಾತ್ರ ಮತ್ತು ಫಿಲ್ಮಿ ದುನಿಯಾ, ಕಾಂಪ್ಲಿಮೆಂಟರಿ ರೈಡ್‌ಗಳು, ಮನರಂಜನಾ ಕಾರ್ಯಕ್ರಮಗಳು - ಸ್ಪಿರಿಟ್ ಆಫ್ ರಾಮೋಜಿ, ವೈಲ್ಡ್ ವೆಸ್ಟ್ ಸ್ಟಂಟ್ ಶೋ, ಡೋಮ್ ಶೋ ಮತ್ತು ಲೈಟ್ಸ್-ಕ್ಯಾಮರಾ-ಆ್ಯಕ್ಷನ್, ಇಕೋ-ಝೋನ್‌ಗೆ ಭೇಟಿ, ಬರ್ಡ್ ಪಾರ್ಕ್, ಬಟರ್‌ಫ್ಲೈ ಪಾರ್ಕ್ ಮತ್ತು ಬೋನ್ಸಾಯ್ ಗಾರ್ಡನ್, ಮಕ್ಕಳ ಆಕರ್ಷಣೆಯಾಗಿರುವ ಫಂಡೂಸ್ತಾನ್, ಬೋರಾಸುರ-ಸ್ಪಿನ್​-ಚಿಲ್ಲಿಂಗ್ ವಾಕ್​ ಥ್ರೂ, ರೈನ್ ಡ್ಯಾನ್ಸ್ ಮತ್ತು ಬಾಹುಬಲಿ ಸೆಟ್‌ಗೆ ಭೇಟಿ ನೀಡಿ ಸಖತ್​ ಎಂಜಾಯ್​ ಮಾಡಲು ಇಂದೇ ರೆಡಿಯಾಗಿ..

ಹಾಲಿಡೇ ಕಾರ್ನಿವಲ್ ಸ್ಟಾರ್ ಎಕ್ಸ್​ಪಿರಿಯನ್ಸ್​ ಪ್ಯಾಕೇಜ್​(ಬೆಳಗ್ಗೆ 9ರಿಂದ ರಾತ್ರಿ 8ರವರೆಗೆ):ಈ ಪ್ರೀಮಿಯಂ ಪ್ಯಾಕೇಜ್ ಪ್ರದರ್ಶನಗಳು, ಆಕರ್ಷಣೆಗಳು ಮತ್ತು ಮಧ್ಯಾಹ್ನದ ಊಟವನ್ನು ಹೊಂದಿದೆ. ಈ ಪ್ಯಾಕೇಜ್​ ಪಡೆದ ಪ್ರವಾಸಿಗರನ್ನು ಎಸಿ ಬಸ್​ಗಳ ಮೂಲಕ ರಾಮೋಜಿ ಫಿಲ್ಮ್ ಸಿಟಿಗೆ ಕೊಂಡೊಯ್ಯಲಾಗುತ್ತದೆ. ಪ್ರವಾಸಿಗರು ಸುಂದರ ಲೋಕದಲ್ಲಿರುವ ಶೂಟಿಂಗ್ ಸ್ಥಳಗಳು ಮತ್ತು ಗಾರ್ಡನ್‌ಗಳು, ರಾಮೋಜಿ ಮೂವಿ ಮ್ಯಾಜಿಕ್ ಪ್ರದರ್ಶನ, ಆ್ಯಕ್ಷನ್ ಥಿಯೇಟರ್, ಸ್ಪೇಸ್ ಯಾತ್ರ ಮತ್ತು ಫಿಲ್ಮಿ ದುನಿಯಾ, ಕಾಂಪ್ಲಿಮೆಂಟರಿ ರೈಡ್‌ಗಳು, ಮನರಂಜನಾ ಕಾರ್ಯಕ್ರಮಗಳು - ಸ್ಪಿರಿಟ್ ಆಫ್ ರಾಮೋಜಿ, ವೈಲ್ಡ್ ವೆಸ್ಟ್ ಸ್ಟಂಟ್ ಶೋ, ಡೋಮ್ ಶೋ ಮತ್ತು ಲೈಟ್ಸ್- ಕ್ಯಾಮರಾ- ಆ್ಯಕ್ಷನ್, ಇಕೋ-ಝೋನ್‌ಗೆ ಭೇಟಿ, ಬರ್ಡ್ ಪಾರ್ಕ್, ಬಟರ್‌ಫ್ಲೈ ಪಾರ್ಕ್ ಮತ್ತು ಬೋನ್ಸಾಯ್ ಗಾರ್ಡನ್, ಮಕ್ಕಳ ಆಕರ್ಷಣೆಯಾಗಿರುವ ಫಂಡೂಸ್ತಾನ್, ಬೋರಾಸುರ-ಸ್ಪಿನ್​-ಚಿಲ್ಲಿಂಗ್ ವಾಕ್​ ಥ್ರೂ, ರೈನ್ ಡ್ಯಾನ್ಸ್ ಮತ್ತು ಬಾಹುಬಲಿ ಸೆಟ್‌ಗೆ ಭೇಟಿ ನೀಡಿ ಸಖತ್​ ಎಂಜಾಯ್​ ಮಾಡಬಹುದಾಗಿದೆ.

ವಿಶ್ವವಿಖ್ಯಾತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶುರುವಾಗ್ತಿದೆ ಕಾರ್ನೀವಲ್​ ಹಬ್ಬ

ಹಾಲಿಡೇ ಕಾರ್ನಿವಲ್ ಸ್ಟಾರ್ ಎಕ್ಸ್​ಪಿರಿಯನ್ಸ್​ ಸಂಜೆ ಪ್ಯಾಕೇಜ್​(ಮಧ್ಯಾಹ್ನ 1ರಿಂದ ರಾತ್ರಿ 8ರವರೆಗೆ):ವಿಶೇಷ ಸಂಜೆಯ ಪ್ಯಾಕೇಜ್​ನಲ್ಲಿ ಪ್ರವಾಸಿಗರಿಗೆ ಎಸಿ ಕೋಚ್‌ನಿಂದ ಸುಗಮ ಪ್ರವಾಸ, ಹ್ಯಾಪಿ ಸ್ಟ್ರೀಟ್​ನಲ್ಲಿ ಮೋಜಿನ ಚಟುವಟಿಕೆಗಳು, ಮನ ಸೆಳೆಯುವ ಕಾರ್ನಿವಲ್ ಪರೇಡ್, ಸಂಜೆಯ ಮನರಂಜನೆ, ಪ್ರಕಾಶಿತ ವಾತಾವರಣ, ಮಧ್ಯಾಹ್ನದ ಊಟ ಅಥವಾ ಗಾಲಾ ಡಿನ್ನರ್ ಅನ್ನು ಒದಗಿಸುತ್ತದೆ. ಭಾಗವತಂ ಪೌರಾಣಿಕ ಸೆಟ್, ರಾಮೋಜಿ ಮೂವಿ ಮ್ಯಾಜಿಕ್ - ಆಕ್ಷನ್ ಥಿಯೇಟರ್ ಪ್ರದರ್ಶನಗಳು, ಸ್ಪೇಸ್ ಯಾತ್ರಾ ಮತ್ತು ಫಿಲ್ಮಿ ದುನಿಯಾದಲ್ಲಿನ ಪ್ರದರ್ಶನಗಳು, ಮನರಂಜನಾ ಕಾರ್ಯಕ್ರಮಗಳು - ಸ್ಪಿರಿಟ್ ಆಫ್ ರಾಮೋಜಿ, ವೈಲ್ಡ್ ವೆಸ್ಟ್ ಸ್ಟಂಟ್ ಶೋ, ಡೋಮ್ ಶೋ ಮತ್ತು ಲೈಟ್ಸ್ ಕ್ಯಾಮರಾ- ಆ್ಯಕ್ಷನ್, ಪರಿಸರ ವಲಯ - ಬರ್ಡ್ ಪಾರ್ಕ್, ಬಟರ್ಫ್ಲೈ ಪಾರ್ಕ್ ಮತ್ತು ಬೋನ್ಸಾಯ್ ಗಾರ್ಡನ್ ಮತ್ತು ಬಾಹುಬಲಿ ಸೆಟ್​ಗೆ ಭೇಟಿ ನೀಡಬಹುದಾಗಿದೆ.

ಹಾಲಿಡೇ ಕಾರ್ನಿವಲ್ ಟ್ವಿಲೈಟ್ ಡಿಲೈಟ್ ಪ್ಯಾಕೇಜ್​ (ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ):ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾದ ಈ ಸಂಜೆಯ ಪ್ಯಾಕೇಜ್ ವಿರಾಮದ ಅನುಭವಗಳು ಮತ್ತು ಗಾಲಾ ಡಿನ್ನರ್​ನ್ನು ಒಳಗೊಂಡಿದೆ. ಅತಿಥಿಗಳು ರಾಮೋಜಿ ಮೂವಿ ಮ್ಯಾಜಿಕ್ - ಆ್ಯಕ್ಷನ್ ಥಿಯೇಟರ್, ಬಾಹ್ಯಾಕಾಶ ಯಾತ್ರಾ ಮತ್ತು ಫಿಲ್ಮಿ ದುನಿಯಾ, ಬಾಹುಬಲಿ ಸೆಟ್, ಹ್ಯಾಪಿ ಸ್ಟ್ರೀಟ್‌ನಲ್ಲಿ ಮೋಜಿನ ಚಟುವಟಿಕೆಗಳು, ಕಾರ್ನಿವಲ್ ಪರೇಡ್, ವಿಶೇಷ ಸಂಜೆ ಮನರಂಜನೆ ಮತ್ತು ಪ್ರಕಾಶಿತ ವಾತಾವರಣದಲ್ಲಿ ನಡೆಯುವ ಪ್ರದರ್ಶನಗಳನ್ನು ಅನುಭವಿಸಬಹುದಾಗಿದೆ.

ಅತ್ಯಾಕರ್ಷಕ​ ಸ್ಟೇ ಪ್ಯಾಕೇಜ್​: ಅತ್ಯುತ್ತಮವಾದ ಹಲವಾರು ಆಕರ್ಷಕ ಹೋಟೆಲ್​ ವ್ಯವಸ್ಥೆಗಳು ಈ ಸ್ಟೇ ಪ್ಯಾಕೇಜ್‌ನಲ್ಲಿ ಲಭ್ಯವಿದೆ.ಐಷಾರಾಮಿ ಹೋಟೆಲ್ ಆದ ಸಿತಾರಾ, ಕಂಫರ್ಟ್​ ಹೋಟೆಲ್ ಆದ ತಾರಾ, ಬಜೆಟ್ ಹೋಟೆಲ್ ಆದ ಶಾಂತಿನಿಕೇತನ, ಫಾರ್ಮ್ ಹೌಸ್ ಆದ ವಸುಂಧರಾ ವಿಲ್ಲಾ, - ಪ್ರಶಾಂತ ವಾತಾವರಣದಲ್ಲಿ ಸ್ನೇಹಶೀಲ ವಸತಿಗಾಗಿ ಗ್ರೀನ್ಸ್ ಇನ್ ಮತ್ತು ಶೇರಿಂಗ್​ ವಸತಿ ಮತ್ತು ಗುಂಪುಗಳಿಗೆ ಅತ್ಯುತ್ತಮವಾಗಿರುವ ಸಹರಾ ಹೋಟೆಲ್​ನಲ್ಲಿ ಉಳಿಯಬಹುದಾಗಿದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು www.ramojifilmcity.com ಗೆ ಲಾಗ್ ಇನ್ ಮಾಡಿ ಅಥವಾ 1800 120 2999 ಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಬಹುದಾಗಿದೆ.


ABOUT THE AUTHOR

...view details