ಕರ್ನಾಟಕ

karnataka

ETV Bharat / bharat

ಸಚಿವ ಅಮಿತ್‌ ಶಾ 3 ದಿನಗಳ ಕಾಶ್ಮೀರ ಪ್ರವಾಸ ; ಸೇನಾಧಿಕಾರಿಗಳ ಜತೆ ಸಭೆ, ಮೃತ ಪೊಲೀಸ್‌ ಅಧಿಕಾರಿ ಮನೆಗೆ ಭೇಟಿ - ಪೊಲೀಸ್‌ ಇನ್ಸ್‌ಪೆಕ್ಟರ್‌ ಪರ್ವೇಜ್‌ ಅಹಮ್ಮದ್‌

ಇತ್ತೀಚೆಗೆ ನಡೆದಿದ್ದ ಉಗ್ರರ ದಾಳಿಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಪರ್ವೇಜ್‌ ಅಹಮ್ಮದ್‌ ಮೃತಪಟ್ಟಿದ್ದರು. ಶ್ರೀನಗರದಲ್ಲಿ ಭದ್ರತೆ ಕುರಿತು ಸೇನೆ ಹಾಗೂ ಪೊಲೀಸ್‌ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಕೂಡ ನಡೆಸಿದ್ದಾರೆ..

HM Amit Shah visits residence of slain Insp Parvez Ahmed, who was killed by terrorists last month
ಸಚಿವ ಅಮಿತ್‌ ಶಾ 3 ದಿನಗಳ ಕಾಶ್ಮೀರ ಪ್ರವಾಸ ಆರಂಭ; ಸೇನಾಧಿಕಾರಿಗಳ ಜತೆ ಸಭೆ, ಮೃತ ಪೊಲೀಸ್‌ ಅಧಿಕಾರಿ ಮನೆಗೆ ಭೇಟಿ

By

Published : Oct 23, 2021, 2:25 PM IST

ಶ್ರೀನಗರ :ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರುಮೂರು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದಲ್ಲಿದ್ದಾರೆ. ಇತ್ತೀಚೆಗೆ ಉಗ್ರರ ಗುಂಡಿನ ದಾಳಿಗೆ ಬಲಿಯಾಗಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ಪರ್ವೇಜ್‌ ಅಹಮ್ಮದ್‌ ಅವರ ನಿವಾಸಕ್ಕೆ ಭೇಟಿ ನೀಡಿದ ಶಾ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಪೊಲೀಸ್‌ ಇನ್ಸ್‌ಪೆಕ್ಟರ್‌ ಪರ್ವೇಜ್‌ ಅಹಮ್ಮದ್‌ ಅವರ ನಿವಾಸಕ್ಕೆ ಅಮಿತ್‌ ಶಾ ಭೇಟಿ

ನೌಶೇರಾದಲ್ಲಿ ಮೃತ ಅಧಿಕಾರಿ ಪರ್ವೇಜ್‌ ಅವರ ಪತ್ನಿ ಫಾತಿಮಾ ಅಖ್ತರ್‌ ಅವರಿಗೆ ಸರ್ಕಾರಿ ಕೆಲಸದ ಅಧಿಕೃತ ಪತ್ರವನ್ನು ನೀಡಿದರು. ಈ ವೇಳೆ ಜಮ್ಮು-ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಕೇಂದ್ರ ಸಚಿವ ಜೀತೇಂದ್ರ ಸಿಂಗ್‌ ಹಾಗೂ ಡಿಜಿಪಿ ದಲ್ಬೀರ್‌ ಸಿಂಗ್‌ ಉಪಸ್ಥಿತರಿದ್ದರು. ಇದಾದ ಬಳಿಕ ಶ್ರೀನಗರದಲ್ಲಿ ಭದ್ರತೆ ಕುರಿತು ಸೇನೆ ಹಾಗೂ ಪೊಲೀಸ್‌ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದಿದ್ದಾರೆ.

ABOUT THE AUTHOR

...view details