ಕರ್ನಾಟಕ

karnataka

ETV Bharat / bharat

ನ್ಯುಮೋನಿಯಾ ಚಿಕಿತ್ಸೆಗೆ ತೆರಳಿದ್ದ ಹೆಚ್​ಐವಿ ಪೀಡಿತೆ ಕೊರೊನಾಗೆ ಬಲಿ...! - ಈಟಿವಿ ಭಾರತ್​ ಕನ್ನಡ

ಕೋವಿಡ್​ನ ಎರಡು ಲಸಿಕೆಗಳನ್ನು ಪಡೆದಿದ್ದ, ಹೆಚ್​ಐವಿ ಪೀಡಿತೆ ಮಹಿಳೆಯೊಬ್ಬರು ಕೊರೊನಾದಿಂದ ಮೃತಪಟ್ಟಿರುವ ಘಟನೆ ಇಂದೋರ್​ನಲ್ಲಿ ನಡೆದಿದೆ.

MP: HIV-positive woman succumbs to COVID-19 in Indore
ಹೆಚ್​ಐವಿ ಪೀಡಿತೆ ಮಹಿಳೆ ಕೊರೊನಾಗೆ ಬಲಿ

By

Published : Jul 30, 2022, 11:53 AM IST

ಇಂದೋರ್( ಮಧ್ಯಪ್ರದೇಶ)​:35 ವರ್ಷದ ಹೆಚ್​ಐವಿ ಪೀಡಿತೆ ಮಹಿಳೆ ಕೋವಿಡ್​ ನಿಂದ ಮೃತಪಟ್ಟಿರುವ ಘಟನೆ ಇಂದೋರ್​ನಲ್ಲಿ ನಡೆದಿದೆ. ​​

ಮೃತ ಮಹಿಳೆ ನ್ಯುಮೋನಿಯಾದಿಂದ ಬಳಲುತ್ತಿದ್ದು, ಜುಲೈ 16ಕ್ಕೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಚಿಕಿತ್ಸೆಗಾಗಿ ಸರ್ಕಾರಿ ಮನೋರಮ ರಾಜೆ ಕ್ಷಯರೋಗ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ನ್ಯುಮೋನಿಯಾಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಮಹಿಳೆಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ 27ಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾರೆ. ಇನ್ನು ಮೃತ ಮಹಿಳೆ ಕೋವಿಡ್​ನ​ ಎರಡು ಲಸಿಕೆಗಳನ್ನೂ ಪಡೆದಿದ್ದರಲ್ಲದೇ, ಹೆಚ್​ಐವಿ ಪೀಡಿತೆ ಆಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನು ಇಂದೋರ್​ನಲ್ಲಿ ಕೋವಿಡ್​ನಿಂದ ಮರಣ ಹೊಂದಿದವರ ಸಂಖ್ಯೆ 1,446ಕ್ಕೆ ತಲುಪಿದ್ದು, ಕಳೆದ 24 ಗಂಟೆಯಲ್ಲಿ 121 ಕೊವಿಡ್​ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ನೀವೂ ಮೊಟ್ಟೆ ತಿನ್ನುತ್ತೀರಾ? ಗುಣಮಟ್ಟದ ಮೊಟ್ಟೆಗಳಿಗೆ ಬಂದಿದೆ ಜಪಾನಿ ತಂತ್ರಜ್ಞಾನ!

ABOUT THE AUTHOR

...view details