ಉದಯಪುರ(ರಾಜಸ್ಥಾನ): ಜಿಲ್ಲೆಯಲ್ಲಿ ಮಂಗಳವಾರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿ ನಿಂತಿದ್ದ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಅಪಘಾತದ ಭಯಾನಕ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಸಾಲುಂಬರ್ ರಸ್ತೆಯ ಅಮರಪುರ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಮಾಹಿತಿ ಪ್ರಕಾರ ಅಮರಪುರ ಗ್ರಾಮದ ಮುಖ್ಯ ಮಾರುಕಟ್ಟೆಯ ರಸ್ತೆಯಲ್ಲಿರುವ ಅಂಗಡಿಯಿಂದ ಇಬ್ಬರು ಮಹಿಳೆಯರು ಶಾಪಿಂಗ್ ಮುಗಿಸಿ ಹೊರ ಬಂದಿದ್ದಾರೆ. ಸಾಗಾ ಮತ್ತು ಸುಗ್ನಾ ಅಂಗಡಿಯ ಹೊರಗೆ ಕಾರೊಂದರ ಹಿಂದೆ ನಿಂತಿದ್ದಾಗ ನಿಯಂತ್ರಣ ತಪ್ಪಿದ ಕಾರೊಂದು ಅತಿವೇಗದಲ್ಲಿ ಬಂದು ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ.