ಚೆನ್ನೈ(ತಮಿಳುನಾಡು): ಪೊಲೀಸ್ ವಾಹನವನ್ನು ಬಳಸಿ ಮಹಿಳೆಯೊಬ್ಬರನ್ನು ಸಾವಿಗೆ ಕಾರಣವಾದ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ಅಪರಾಧ ತನಿಖಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್‌ಪಿ) ಕುಮಾರನ್ ಎಂಬುವವರ ಪುತ್ರನನ್ನು ತಮಿಳುನಾಡು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಾಹಿತಿ ಪ್ರಕಾರ, ಲೋಕೇಶ್ (21) ಬಂಧಿತ ವ್ಯಕ್ತಿ. ಲೋಕೇಶ್ ತನ್ನ ತಂದೆ ಕುಮಾರ್ ಅವರ ಸರ್ಕಾರಿ ವಾಹನದಲ್ಲಿ ತಾಯಿಯನ್ನು ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಇಳಿಸಿ, ತನ್ನ ಮನೆಗೆ ಹಿಂದಿರುಗುತ್ತಿದ್ದ. ಈ ವೇಳೆ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆ ಬಳಿ ರಸ್ತೆ ದಾಟುತ್ತಿದ್ದ 30 ವರ್ಷದ ಅಮೃತ ಎಂಬುವವರಿಗೆ ಕಾರು ಗುದ್ದಿ, ಪರಾರಿಯಾಗಿದ್ದನು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾಳೆ.