ಶ್ರೀನಗರ:ಪ್ರಸ್ತುತ ಇರುವ ಸರ್ವಾಧಿಕಾರಿ ಧೋರಣೆ ವಿರುದ್ಧ ನಿಂತಿರುವುದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇತಿಹಾಸ ನೆನಪಿಸಿಕೊಳ್ಳಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಇಂದಿನ ಸರ್ವಾಧಿಕಾರಿ ಧೋರಣೆ ವಿರುದ್ಧ ರಾಹುಲ್ ಹೋರಾಟ: ಇತಿಹಾಸ ಸ್ಮರಿಸಲಿದೆ ಎಂದ ಮುಫ್ತಿ - Peoples Democratic Party (PDP) chief Mehbooba Mufti
ಸರಣಿ ಟ್ವೀಟ್ಗಳನ್ನು ಮಾಡಿರುವ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ನವ ಭಾರತವು ಬಂಡವಾಳಶಾಹಿಗಳು ಹಾಗೂ ಆಯ್ದ ಕೆಲವರ ಹಿಡಿತದಲ್ಲಿದೆ. ನಿಮಗೆ ಬೇಕಾದ ಹಾಗೆ ರಾಹುಲ್ ಗಾಂಧಿ ಅವರನ್ನು ಹಾಸ್ಯ ಮಾಡಿ. ಆದರೆ, ಸತ್ಯದ ಬಗ್ಗೆ ಮಾತನಾಡಲು ಧೈರ್ಯಮಾಡುವ ಏಕೈಕ ರಾಜಕಾರಣಿ ಎಂದರೆ ಅದು ರಾಹುಲ್ ಗಾಂಧಿ. ಇಂದಿನ ಸರ್ವಾಧಿಕಾರಿ ಧೋರಣೆ ವಿರುದ್ಧ ನಿಂತಿರುವುದಕ್ಕೆ ಅವರನ್ನು ಇತಿಹಾಸ ಸ್ಮರಿಸಲಿದೆ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಕೂಡ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳ ಮೇಲೆ ಕೇಂದ್ರವು ತನ್ನ 'ಸಾಕು ಸಂಸ್ಥೆ'ಯಾದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ವನ್ನು ಬಿಚ್ಚಿಟ್ಟಿದೆ ಎಂದು ಆರೋಪಿಸಿದ್ದಾರೆ.