ಕರ್ನಾಟಕ

karnataka

ETV Bharat / bharat

'ಲಾತ್​ಮಾರ್​ ಹೋಳಿ'ಗೆ ಸಜ್ಜಾದ ಐತಿಹಾಸಿಕ ಬರ್ಸಾನ ನಗರ; ಏನಿದರ ವಿಶೇಷತೆ? - ಈಟಿವಿ ಭಾರತ್​ ಕನ್ನಡ

ಕೃಷ್ಣನ ಬಲು ಮೆಚ್ಚಿನ ಬಣ್ಣದೋಕುಳಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಮಥುರಾ, ವೃಂದಾವನಗಳಲ್ಲಿ ಆಚರಿಸಲಾಗುವುದು.

historical-city-of-barsana-gearing-up-to-play-lathmar-holi-what-is-special
historical-city-of-barsana-gearing-up-to-play-lathmar-holi-what-is-special

By

Published : Feb 27, 2023, 4:51 PM IST

ಮಥುರಾ ( ಉತ್ತರ ಪ್ರದೇಶ): ಬಣ್ಣ ಬಣ್ಣದ ರಂಗಿನ ಹೋಳಿ ಹಬ್ಬ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಅದರಲ್ಲೂ ಉತ್ತರ ಪ್ರದೇಶದಲ್ಲಿ ಈ ಹಬ್ಬ ಬಲು ವಿಶೇಷ. ಇಲ್ಲಿನ ಮಥುರಾ, ವೃಂದಾವನ ಸೇರಿದಂತೆ ಹಲವು ಕಡೆ ವಾರನುಗಟ್ಟಲೇ ಹಬ್ಬ ಆಚರಿಸುವ ಜೊತೆಗೆ ಪ್ರತಿ ನಿತ್ಯವೂ ವಿಶೇಷ ಹೋಳಿ ಆಚರಣೆಗಳು ನಡೆಯುತ್ತವೆ. ಅದರಲ್ಲಿ ಒಂದು ಈ 'ಲಾತ್​ ಮಾರ್​ ಹೋಳಿ' (ಕೋಲಿನಿಂದ ಹೊಡೆಯುವ ಹೋಳಿ).

ಕೃಷ್ಣನ ಪ್ರೇಯಸಿಯಾದ ರಾಧಾ ರಾಣಿಯ ಊರಾದ ಬರ್ಸಾನದಲ್ಲಿ ಈ ಹೋಳಿಯನ್ನು ವಿಶೇಷವಾಗಿ ಆಚರಿಸಲಾಗುವುದು. ಮಹಿಳೆಯರಿಗೆ ಬಣ್ಣ ಹಾಕಲು ಅವರ ಹಿಂದೆ ಪುರುಷರು ಹೋದಾಗ, ಈ ಬಣ್ಣದಿಂದ ತಪ್ಪಿಸಿಕೊಳ್ಳಲು, ಮಹಿಳೆಯರು ಕೋಲಿನಿಂದ ಹೊಡೆಯುತ್ತಾರೆ. ಇದೇ ಕಾರಣಕ್ಕೆ ಇದನ್ನು ಲಾತ್​​​ ಮಾರ್​​ ಹೋಳಿ ಎಂದು ಕರೆಯುತ್ತಾರೆ. ಪ್ರತಿ ವರ್ಷ ಈ ಸಂಭ್ರಮದ ಲಾತ್​ಮಾರ್​ ಹೋಳಿ ಆಚರಣೆಗೆ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಇಲ್ಲಿ ಸೇರುತ್ತಾರೆ. ಈ ಹಬ್ಬ ರಾಧೆ ಮತ್ತು ಕೃಷ್ಣರಿಗೆ ಸಮರ್ಪಣೆಯಾಗಿ ಆಚರಿಸಲಾಗುವುದು

ದ್ವಾಪರ ಯುಗದ ಮೆಲುಕು: ಬರ್ಸಾನದಲ್ಲಿ ನಡೆಯುವ ಈ ಹೋಳಿ ಆಚರಣೆ ಮೂಲಕ ದ್ವಾಪರ ಯುಗದ ಆಟದ ಮೆಲುಕು ಹಾಕಲಾಗುವುದು. ದ್ವಾಪರ ಯುಗದಲ್ಲಿ ಕೃಷ್ಣ, ರಾಧಾ ಮತ್ತು ಆಕೆಯ ಗೆಳತಿಗೆ ಬಣ್ಣ ಬಳಿಯಲು ಬರುತ್ತಿದ್ದ. ಕೃಷ್ಣದ ಈ ಬಣ್ಣದೊಕುಳಿಯಿಂದ ತಪ್ಪಿಸಿಕೊಳ್ಳಲು ಅವರು ಅವನಿಗೆ ಕೋಲಿನಿಂದ ಹೊಡೆಯಲು ಮುಂದಾಗುತ್ತಿದ್ದರು. ಈ ಘಟನೆಯನ್ನು ಲಾತ್​ ಮಾರ್​ ಹೋಲಿ ಮೂಲಕ ಮತ್ತೆ ನೆನಪಿಸಲಾಗುವುದು ಎನ್ನುತ್ತಾರೆ ಬರ್ಸಾನದ ಲಾಲ್ಡಿ ದೇಗುಲದ ಅರ್ಚಕರಾದ ರಾಸ್​ ಬಿಹಾರಿ.

ಮಥುರಾದಲ್ಲಿ 25 ದಿನಗಳ ಕಾಲ ಹೋಳಿಯನ್ನು ಆಚರಿಸಲಾಗುವುದು. ವಿವಿಧ ಸ್ಥಳದಲ್ಲಿ, ವಿವಿಧ ಶೈಲಿಯಲ್ಲಿ ಈ ಹೋಳಿ ಆಚರಣೆ ನಡೆಯುತ್ತದೆ. ಗೋಕುಲದ ರಾಮನ್ರೆತಿಯಲ್ಲಿ 'ಹೂವಿನ ಹೋಳಿ' ಆಡಲಾಗುವುದು. ಬರ್ಸನದ ಬಳಿಕ ನಂದಾಗವ್​ನಲ್ಲಿ 'ಲಾತ್​ ಮಾರ್​ ಹೋಳಿ' ಆಡಲಾಗುವುದು. ಇದಾದ ಬಳಿಕ ವೃಂದಾವನದಲ್ಲಿ 'ರಂಗ್​ಭರಾನಿ' ಆಚರಿಸಲಾಗುವುದು. ಹೀಗೆ ಜಿಲ್ಲೆಯಲ್ಲಿ ವಿವಿಧ ರೀತಿಯ ರಂಗೋತ್ಸವ ಆಚರಣೆ ಮಾಡಲಾಗುವುದು ಎಂದು ಪುಲ್ಕೇಟ್​ ಖೇರ್​ ಜಿಲ್ಲಾ ಮ್ಯಾಜಿಸ್ಟ್ರೇಟರ್​ ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್​: ಇನ್ನು ಮಂಗಳವಾರ ಬರ್ಸಾನದಲ್ಲಿ ನಡೆಯುವ ಈ ಲಾತ್​ ಮರ್​ ಹೋಳಿ ವೀಕ್ಷಣೆಗೆ ಅಪಾರ ಪ್ರಮಾಣದ ಭಕ್ತರು ಆಗಮಿಸುತ್ತಾರೆ. ಈ ವೇಳೆ ಯಾವುದೇ ರೀತಿಯ ಅವಘಡ ನಡೆಯದಂತೆ ತಡೆಯಲು, ಆರು ಹೆಚ್ಚುವರಿ ಎಸ್​ಪಿ, 12 ಸರ್ಕಲ್​ ಅಧಿಕಾರಿ, 60 ಇನ್ಸ್​ಪೆಕ್ಟರ್​, 300 ಸಬ್​ ಇನ್ಸ್​ಪೆಕ್ಟರ್​, 1,200 ಕಾನ್ಸಟೇಬಲ್​, 40 ಮಹಿಳಾ ಸಬ್​ ಇನ್ಸ್​ಪೆಕ್ಟರ್​, 130 ಮಹಿಳಾ ಕಾನ್ಸಟೇಬಲ್​, 4 ಟ್ರಾಫಿಕ್​ ಇನ್ಸ್​ಪೆಕ್ಟರ್​​, 50 ಟ್ರಾಫಿಕ್​ ಸಬ್​ ಇನ್ಸ್​ಪೆಕ್ಟರ್​ಗಳ ನಿಯೋಜನೆ ಮಾಡಲಾಗಿದೆ.

ಮಹಿಳೆಯರ ಜೊತೆ ನಡೆಯುವ ಅಸಭ್ಯ ವರ್ತನೆ ತಡೆಯುವ ಉದ್ದೇಶದಿಂದ ಸಾಮಾನ್ಯ ಉಡುಪಿನಲ್ಲೂ ಗುಂಪಿನ ಬಳಿ ಕೂಡ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಹಬ್ಬವನ್ನು ಆರು ವಲಯದಲ್ಲಿ 14 ಸೆಕ್ಟರ್​ಗಳಲ್ಲಿ ಆಚರಿಸಲಾಗುವುದು. 40 ಕಡೆ ಪಾರ್ಕಿಂಗ್​ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್​ಪಿ ಶೈಲೇಶ್​ ಕುಮಾರ್​ ಪಾಂಡೆ ತಿಳಿಸಿದ್ದಾರೆ.

ಇದನ್ನೂ ಓದಿ:ಗುಜರಾತ್ ಜೈಂಟ್ಸ್ ತಂಡದ ಜರ್ಸಿ ಅನಾವರಣ : ನಾಯಕಿಯ ಪಟ್ಟಕ್ಕಾಗಿ ಹುಡುಕಾಟ

ABOUT THE AUTHOR

...view details