ಪುಣೆ (ಮಹಾರಾಷ್ಟ್ರ) :ಇಲ್ಲಿನ ಮರಾಠವಾಡದಲ್ಲಿ ಡೆಕ್ಕನ್ ಕಾಲೇಜಿನ ಪುರಾತತ್ವ ಇಲಾಖೆ ನಡೆಸಿದ ಸಂಶೋಧನೆಯಲ್ಲಿ 23 ಸಾವಿರ ವರ್ಷಗಳ ಹಿಂದೆ ಜೀವಿಸಿದ್ದ ನೀರ್ಗುದುರೆ(ಹಿಪಪಾಟಮಸ್) ಅವಶೇಷಗಳು ಪತ್ತೆಯಾಗಿವೆ. ಅಲ್ಲದೇ, ಈ ಸಂಶೋಧನೆಯಲ್ಲಿ ನೀರ್ಗುದುರೆ ಸೇರಿದಂತೆ ಆನೆ ಮತ್ತು ಹುಲಿಗಳ ಅವಶೇಷಗಳು ಪತ್ತೆಯಾಗಿವೆ.
ಈಗ ಮರಾಠವಾಡ ಬರಪೀಡಿತ ಪ್ರದೇಶವಾಗಿದ್ದು, ಸಾಕಷ್ಟು ನೀರಿನ ಸಮಸ್ಯೆ ಎದುರಿಸುತ್ತಿದೆ. ಆದರೆ, ಈ ಹಿಂದೆ ಮರಾಠವಾಡದಲ್ಲಿ ದೊಡ್ಡ ಜಲಸಂಪನ್ಮೂಲ ಮತ್ತು ಸಸ್ಯವರ್ಗವಿತ್ತು. ಹಾಗಾಗಿ ಇಲ್ಲಿ ಪ್ರಾಣಿಗಳು ಅತಿ ಹೆಚ್ಚು ವಾಸವಾಗಿದ್ದವು ಎಂದು ಸಂಶೋಧನೆ ತಿಳಿಸಿದೆ. ಡೆಕ್ಕನ್ ಕಾಲೇಜಿನ ಪುರಾತತ್ವ ವಿಭಾಗದ ಮಾಜಿ ಪ್ರಾಧ್ಯಾಪಕ ಡಾ. ವಿಜಯ್ ಸಾಠೆ ಅವರ ಮಾರ್ಗದರ್ಶನದಲ್ಲಿ 2004 ರಿಂದ ಲಾತೂರ್, ಬೀಡ್‌ನಲ್ಲಿ ಸಂಶೋಧನೆ ಪ್ರಾರಂಭವಾಯಿತು. 2004 ರಿಂದ 2023 ರವರೆಗೆ ಲಾತೂರ್ ಜಿಲ್ಲೆಯ ಹಾರವಾಡಿ, ಅಂಬಾಜೋಗೈ ಪ್ರದೇಶದಲ್ಲಿ ನಡೆಸಿದ ಸಂಶೋಧನೆ ಪ್ರಕಾರ ಅನೇಕ ಪ್ರಾಣಿಗಳು ವಾಸಿಸುತ್ತಿರುವುದು ಕಂಡು ಬಂದಿದೆ. ಉತ್ಖನನ (ಭೂಮಿಯನ್ನು ಅಗೆಯುವುದು)ದ ನಂತರ ದೊರೆತ ಅವಶೇಷಗಳಲ್ಲಿ ಮಹಾರಾಷ್ಟ್ರಕ್ಕಿಂತ ಮೊದಲು ಬೃಹತ್ ಅರಣ್ಯ ಪ್ರದೇಶ ಇದಾಗಿತ್ತು ಎಂದು ಹೇಳಲಾಗುತ್ತಿದೆ.