ಕರ್ನಾಟಕ

karnataka

ETV Bharat / bharat

'ಮಧುಬನ್​' ವಿರುದ್ಧ ಮುಂದುವರೆದ ಅಸಮಾಧಾನ: ಸನ್ನಿ ಪೋಸ್ಟರ್​ಗಳನ್ನು ಸುಟ್ಟ ಹಿಂದೂಪರ ಸಂಘಟನೆಗಳು - ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಸನ್ನಿ ಲಿಯೋನ್​ಗೆ ಎಚ್ಚರಿಕೆ

ಅಂತಾರಾಷ್ಟ್ರೀಯ ಹಿಂದೂ ಪರಿಷತ್​ ಮತ್ತು ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ಸನ್ನಿ ಲಿಯೋನ್​ ಪೋಸ್ಟರ್​ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದು, ಹರಿಪರ್ವತ್​ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Hindutva outfits burn posters of Sunny Leone over music video
'ಮಧುಬನ್​' ವಿರುದ್ಧ ಮುಂದುವರೆದ ಅಸಮಾಧಾನ: ಸನ್ನಿ ಪೋಸ್ಟರ್​ಗಳನ್ನು ಸುಟ್ಟ ಹಿಂದೂಪರ ಸಂಘಟನೆಗಳು

By

Published : Dec 29, 2021, 3:58 AM IST

ಆಗ್ರಾ, ಉತ್ತರಪ್ರದೇಶ: ಬಾಲಿವುಡ್​ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಅವರ​ 'ಮಧುಬನ್'​​​ ವಿಡಿಯೋ ಸಾಂಗ್​ ವಿರುದ್ಧ ಕೆಲವು ಹಿಂದೂಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿದ್ದು, ಸನ್ನಿ ಲಿಯೋನ್​ ಪೋಸ್ಟರ್​ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿವೆ.

ಹಿಂದೂ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿರುವ ಎಂಜಿ ರಸ್ತೆಯಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್​ ಮತ್ತು ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ಸನ್ನಿ ಲಿಯೋನ್ ವಿರುದ್ಧ ಘೋಷಣೆಗಳನ್ನು ಕೂಗಿ, ಸನ್ನಿ ಲಿಯೋನ್​ ಪೋಸ್ಟರ್​ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಡನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ, ಹರಿಪರ್ವತ್​ ಪೊಲೀಸ್ ಠಾಣೆಯಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್​ ಮತ್ತು ರಾಷ್ಟ್ರೀಯ ಬಜರಂಗದಳ ಕಾರ್ಯಕರ್ತರು ದೂರು ನೀಡಿದ್ದು, ಯೂಟ್ಯೂಬ್​ನಿಂದ ಹಾಡಲು ತೆಗೆಯಬೇಕೆಂದು ಒತ್ತಾಯಿಸಿದ್ದಾರೆ.

ಕೆಲವು ದಿನಗಳ ಮುನ್ನ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸನ್ನಿ ಲಿಯೋನ್​ಗೆ ಎಚ್ಚರಿಕೆಯನ್ನು ನೀಡಿದ್ದು, ಯೂಟ್ಯೂಬ್​ನಿಂದ 'ಮಧುಬನ್ ಮೇ ರಾಧಿಕಾ ನಾಚೆ' ಹಾಡನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿದ್ದು, ಮೂರು ದಿನಗಳಲ್ಲಿ ಹಾಡನ್ನು ತೆಗೆಯದಿದ್ದರೆ, ಕಾನೂನು ಕ್ರಮ ಎದುರಿಸಲು ಸಿದ್ಧವಾಗಬೇಕೆಂದು ಎಚ್ಚರಿಕೆ ನೀಡಿದ್ದರು.

ಸದ್ಯಕ್ಕೆ ಕ್ಷಮೆ ಕೇಳಿರುವ ಹಾಡನ್ನು ನಿರ್ಮಿಸಿರುವ ತಂಡ, ಹಾಡಿನ ಸಾಹಿತ್ಯವನ್ನು ಬದಲಾಯಿಸಿಕೊಳ್ಳುವುದಾಗಿ ಹೇಳಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಪೊಲೀಸರೊಂದಿಗೆ ರಂಪಾಟ ನಡೆಸಿದ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್

ABOUT THE AUTHOR

...view details