ಕರ್ನಾಟಕ

karnataka

ಶಿವನ ದೇವಸ್ಥಾನದಲ್ಲಿ ಇಟಲಿ ವಧು ವರಿಸಿದ ಯುವಕ.. ಹಿಂದೂ ಸಂಪ್ರದಾಯದಂತೆ ನಡೆಯಿತು ವಿವಾಹ

By

Published : Aug 21, 2023, 2:27 PM IST

ಉತ್ತರಪ್ರದೇಶದ ಶಿವ ದೇವಾಲಯದಲ್ಲಿ ಹಿಂದೂ ಯುವಕನೊಬ್ಬ ಇಟಲಿ ವಧುವಿನ ಜೊತೆ ಸಪ್ತಪದಿ ತುಳಿದಿದ್ದಾರೆ. ಇಬ್ಬರ ಮದುವೆ ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಶೀರ್ವದಿಸಿದ್ದಾರೆ.

Jaunpur trilochan videsh dulhaniya  Hindu youth marries Italian bride in Jaunpur  marries Italian bride in Jaunpur  Italian bride in Jaunpur  ಹಿಂದೂ ಸಂಪ್ರದಾಯದಂತೆ ನಡೆಯಿತು ವಿವಾಹ  ಶಿವನ ದೇವಸ್ಥಾನದಲ್ಲಿ ಇಟಲಿ ವಧುವನ್ನು ವರಿಸಿದ ಯುವಕ  ಹಿಂದೂ ಯುವಕನೊಬ್ಬ ಇಟಲಿ ವಧುವಿನ ಜೊತೆ ಸಪ್ತಪದಿ  ಇಬ್ಬರ ಮದುವೆ ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆ  ಐತಿಹಾಸಿಕ ತ್ರಿಲೋಚನ ಮಹಾದೇವ ಶಿವ ದೇವಾಲಯ  ಹಿಂದೂ ಸಂಪ್ರದಾಯದಂತೆ ವಿವಾಹ  ವಾರಣಾಸಿಯ ಕಾರ್ಖಿಯಾನ್ವ್ ಗ್ರಾಮದ ಫುಲ್ಪುರ್ ನಿವಾಸಿ  ಇಂಗ್ಲಿಷ್ ಶಿಕ್ಷಕಿ ಆಗಿದ್ದಾರೆ ತಾನಿಯಾ  ನನಗೆ ಇಲ್ಲಿನ ಆಹಾರ ಎಂದರೆ ತುಂಬಾ ಇಷ್ಟ  ಭಾರತೀಯ ಪೌರತ್ವ ಬಯಸುತ್ತಿದ್ದಾರೆ ತಾನಿಯಾ
ಶಿವನ ದೇವಸ್ಥಾನದಲ್ಲಿ ಇಟಲಿ ವಧುವನ್ನು ವರಿಸಿದ ಯುವಕ

ಜೌನ್‌ಪುರ, ಉತ್ತರಪ್ರದೇಶ: ಜಿಲ್ಲೆಯ ಜಲಾಲ್‌ಪುರದ ಐತಿಹಾಸಿಕ ತ್ರಿಲೋಚನ ಮಹಾದೇವ ಶಿವ ದೇವಾಲಯದಲ್ಲಿ ಹಿಂದೂ ಯುವಕನೊಬ್ಬ ಇಟಲಿ ಹುಡುಗಿಯನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ವಿದೇಶಿ ವಧು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಆಗಮಿಸಿದ್ದರು.

ವಾರಣಾಸಿಯ ಕಾರ್ಖಿಯಾನ್ವ್ ಗ್ರಾಮದ ಫುಲ್ಪುರ್ ನಿವಾಸಿ ಅಖಿಲೇಶ್ ವಿಶ್ವಕರ್ಮ ಅವರು 2016 ರಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದ ನಂತರ ಕತಾರ್ ಏರ್‌ವೇಸ್‌ನಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. 2022 ರಲ್ಲಿ, ಕತಾರ್‌ನ ಸೌಕ್ ವಾಕಿಫ್‌ನಲ್ಲಿರುವ ಹೋಟೆಲ್‌ನಲ್ಲಿ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಟಲಿಯಿಂದ ಬಂದಿದ್ದ ತಾನಿಯಾ ಪಬ್ಲಿಕೊ ಅವರನ್ನು ಭೇಟಿಯಾದರು. ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಬೇರೆ ದೇಶದಲ್ಲಿ ಮದುವೆಯಾಗಲು ನಿರ್ಧರಿಸಿದರು. ಮಾರ್ಚ್ 1ರಂದು ಐರೋಪ್ಯ ರಾಷ್ಟ್ರವಾದ ಜಾರ್ಜಿಯಾ ರಾಜಧಾನಿ ಟಿಬಿಲಿಸಿಯಲ್ಲಿ ಅಲ್ಲಿನ ಕಾನೂನಿನ ಪ್ರಕಾರ ತಮ್ಮ ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ಕೋರ್ಟ್​ನಲ್ಲಿ ಮದುವೆ ಮಾಡಿಕೊಂಡಿದ್ದರು.

ಶಿವನ ದೇವಸ್ಥಾನದಲ್ಲಿ ಇಟಲಿ ವಧುವನ್ನು ವರಿಸಿದ ಯುವಕ

ಇಂಗ್ಲಿಷ್ ಶಿಕ್ಷಕಿ ಆಗಿದ್ದಾರೆ ತಾನಿಯಾ: ತಾನಿಯಾ ಪಬ್ಲಿಕೊ ಅವರನ್ನು ಮೊದಲು ಭೇಟಿಯಾದಾಗ ಅವರು ಕತಾರ್‌ನ ಶಾಲೆಯೊಂದರಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿದ್ದರು. ಇಂದಿಗೂ ಅದೇ ಜಾಗದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ. ನನ್ನ ಜನ್ಮಸ್ಥಳ ಕಾಶಿಯನ್ನು ನೋಡಬೇಕೆಂಬುದು ಅವರ ಆಸೆಯಾಗಿತ್ತು. ಈ ಕಾರಣದಿಂದಾಗಿ, ಮೊದಲು ಅವರ ಪ್ರವೇಶ ವೀಸಾವನ್ನು ಪಡೆದುಕೊಂಡೆ. ನಂತರ ನಾನು ಅವರನ್ನು ನನ್ನ ಹಳ್ಳಿಗೆ ಕರೆದುಕೊಂಡು ಹೋದೆ. ಇಲ್ಲಿ ವಾಸಿಸುವುದು ತಾನಿಯಾಗೆ ತುಂಬಾ ಸಂತೋಷವಾಗಿದೆ ಎಂದು ಅಖಿಲೇಶ್​ ಹೇಳುತ್ತಾರೆ.

ಭಾರತೀಯ ಪೌರತ್ವ ಬಯಸುತ್ತಿದ್ದಾರೆ ತಾನಿಯಾ:ತಾನಿಯಾ ಭಾರತೀಯ ಪೌರತ್ವವನ್ನು ಬಯಸುತ್ತಿದ್ದಾರೆ. ಸುಮಾರು ಎರಡು ವರ್ಷಗಳ ನಂತರ ತಾನಿಯಾ ಅವರ OCI ಕಾರ್ಡ್ ಮಾಡಲಾಗುವುದು. ಮತದಾನದ ಹಕ್ಕನ್ನು ಹೊರತುಪಡಿಸಿ ಭಾರತೀಯರಾಗಿರುವ ಎಲ್ಲ ಹಕ್ಕುಗಳನ್ನು ಅವರು ಪಡೆಯುತ್ತಾರೆ. ಇಬ್ಬರೂ ತಮ್ಮ ಉದ್ಯೋಗಕ್ಕಾಗಿ ಒಂದು ವಾರದ ನಂತರ ಕತಾರ್‌ಗೆ ಹಿಂತಿರುಗಬೇಕಾಗಿದೆ ಎಂದು ಅಖಿಲೇಶ್ ಹೇಳಿದರು.

ನನಗೆ ಇಲ್ಲಿನ ಆಹಾರ ಎಂದರೆ ತುಂಬಾ ಇಷ್ಟ:ನಾನು ಹುಟ್ಟಿದ್ದು ಇಟಲಿಯಲ್ಲಿ. ನನ್ನ ಶಿಕ್ಷಣ ಫಿಲಿಪ್ಪಿನ್ಸ್​​ನಲ್ಲಿ ಆಗಿದೆ. ನಮ್ಮ ಇಡೀ ಕುಟುಂಬ ಅಮೆರಿಕದಲ್ಲಿ ನೆಲೆಸಿದೆ. ನನಗೆ ಭಾರತೀಯರ ಆಹಾರ ಎಂದರೆ ತುಂಬಾ ಇಷ್ಟ. ಅದರಲ್ಲೂ ಪತಿ ಅಖಿಲೇಶ್ ಮಾಡುವ ಚಿಕನ್ ಕರಿ, ಅನ್ನ ಮತ್ತು ಪರಾಠ ನನಗೆ ತುಂಬಾ ಇಷ್ಟ ಎಂದು ತಾನಿಯಾ ಹೇಳಿದ್ದಾರೆ.

ವಿದೇಶಿ ವಧುವಿನೊಂದಿಗೆ ಸಂತೋಷವಾಗಿದೆ ಕುಟುಂಬ: ಅಖಿಲೇಶ್ ವಿದೇಶಿ ಮಹಿಳೆಯನ್ನು ಮದುವೆಯಾಗಿ ಕಾರ್ಖಿಯಾನ್ವ್ ಗ್ರಾಮದ ಮನೆಗೆ ಕರೆತಂದಿದ್ದಾರೆ. ನಂತರ ಇಡೀ ಕುಟುಂಬ ಸಂತೋಷವಾಗಿದೆ. ತಂದೆ ಸುಭಾಷ್ ವಿಶ್ವಕರ್ಮ, ತಾಯಿ ಸಂಗೀತಾ, ಸಹೋದರ ಉಮೇಶ್, ಪ್ರತೀಕ್ ಎಲ್ಲರೂ ತಮ್ಮ ಸಹೋದರನ ಮದುವೆಯಿಂದ ತುಂಬಾ ಖುಷಿಯಾಗಿದ್ದಾರೆ.

ಓದಿ:ಮಗನ ಮದುವೆಯಲ್ಲಿ ಅಪ್ಪನಿಗೆ ಪ್ರೇಮಾಂಕುರ, ನಂತರ ಪ್ರೇಮಿಗೆ ವಂಚನೆ ಆರೋಪ ; ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ!

ABOUT THE AUTHOR

...view details