ಕರ್ನಾಟಕ

karnataka

ETV Bharat / bharat

ಬನಾರಸ್​ ಘಾಟ್​​ಗಳಲ್ಲಿ ಉರ್ದು ಸಾಹಿತ್ಯದ ಕಂಪು ಪಸರಿಸುತ್ತಿರುವ ಹಿಂದೂ ಮಹಿಳೆಯರು - ಉತ್ತರ ಪ್ರದೇಶದ ಲೇಟೆಸ್ಟ್ ನ್ಯೂಸ್

ಮಿರ್ಜಾ ಗಾಲಿಬ್, ಮೀರ್, ಫೈಜ್ ಅಹ್ಮದ್ ಫೈಜ್, ಪರ್ವೀನ್ ಶಕೀರ್ ಮುಂತಾದ ಸಾಹಿತಿಗಳ ಪುಸ್ತಕಗಳನ್ನು ಬನಾರಸ್​ನ ಘಾಟ್​​ಗಳಲ್ಲಿ ಹಿಂದೂ ಮಹಿಳೆಯರು ಮಾರಾಟ ಮಾಡುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

Urdu Poetry books in Banaras
ಬನಾರಸ್​ನ ಘಾಟ್​​ಗಳಲ್ಲಿ ಉರ್ದು ಸಾಹಿತ್ಯ

By

Published : Dec 6, 2020, 5:01 PM IST

ಬನಾರಸ್ (ಉತ್ತರ ಪ್ರದೇಶ): ಬನಾರಸ್​ನ ಸುಮಾರು 80 ಘಾಟ್​ಗಳಲ್ಲಿ ಹಿಂದೂ ಮಹಿಳೆಯರು ಉರ್ದು ಸಾಹಿತ್ಯದ ಪುಸ್ತಕಗಳನ್ನು ಮಾರಾಟ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಬನಾರಸ್​ನ ಘಾಟ್​​ಗಳಲ್ಲಿ ಉರ್ದು ಸಾಹಿತ್ಯದ ಪುಸ್ತಕಗಳ ಮಾರಾಟ

ಮಿರ್ಜಾ ಗಾಲಿಬ್, ಮೀರ್, ಫೈಜ್ ಅಹ್ಮದ್ ಫೈಜ್, ಪರ್ವೀನ್ ಶಕೀರ್ ಮುಂತಾದವರ ಪುಸ್ತಕಗಳನ್ನು ಇಲ್ಲಿ ಮಾರಲಾಗುತ್ತಿದ್ದು, ಪುಸ್ತಕ ಪ್ರಿಯರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಮೊಬೈಲ್​ಗಳಲ್ಲಿ ಕಳೆದುಹೋಗಿರುವ ಯುವ ಜನಾಂಗವನ್ನು ಮತ್ತೆ ಪುಸ್ತಕಗಳತ್ತ ಸೆಳೆಯಲು ಈ ಮಹಿಳೆಯರು ಯಶಸ್ವಿಯಾಗಿದ್ದಾರೆ.

ಕವಿ ಮಿರ್ಜಾ ಗಾಲಿಬ್ ಅವರು ಚಿರಾಗ್ ದಹರ್ ಎಂಬ ಪುಸ್ತಕದಲ್ಲಿ ಬನಾರಸ್​ನ ನಾಗರಿಕತೆ, ಸಂಸ್ಕೃತಿ ಸೇರಿದಂತೆ ಹಲವು ವಿಶೇಷತೆಗಳ ಬಗ್ಗೆ ಬರೆದಿರುವುದು ಸೊಗಸಾಗಿದೆ. ಈ ರೀತಿಯ ಪುಸ್ತಕಗಳು ಸಾಕಷ್ಟು ಪ್ರಸಿದ್ದಿ ಪಡೆದಿವೆ ಎಂದು ಪುಸ್ತಕ ಮಾರಾಟ ಮಾಡುವ ಓರ್ವ ಮಹಿಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓದಿ:ವಾರಣಾಸಿಯಲ್ಲಿ ಭೀಕರ ಮಳೆ: ಉಕ್ಕಿದ ಗಂಗಾ ನದಿ, ಘಾಟ್​ಗಳು ಜಲಾವೃತ

ಮೂರು ವರ್ಷಗಳಿಂದ ಬನಾರಸ್​ನ ಸುಮಾರು 80 ಘಾಟ್​ಗಳಲ್ಲಿ ಪುಸ್ತಕ ವ್ಯಾಪಾರ ನಡೆಯುತ್ತಿದ್ದು, ಹಿಂದಿಗೆ ತರ್ಜುಮೆಯಾಗಿರುವ ಉರ್ದು ಸಾಹಿತ್ಯವನ್ನು ಕೂಡಾ ಮಾರಾಟ ಮಾಡಲಾಗುತ್ತಿದೆ. ಯುವ ಪೀಳಿಗೆ ಅದರಲ್ಲೂ ಕಂಪನಿಗಳಲ್ಲಿ ಕೆಲಸ ಮಾಡುವ ಹಲವರು ಉರ್ದು ಸಾಹಿತ್ಯದ ಕವಿಗಳ ಎಲ್ಲಾ ಆವೃತ್ತಿಯನ್ನು ಕೊಂಡು ಓದುತ್ತಿದ್ದಾರೆ ಎಂದು ಪುಸ್ತಕ ವ್ಯಾಪಾರಿ ಸೋನಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details