ಅಹಮದಾಬಾದ್:ಇಲ್ಲಿನ ಹಜರತ್ ಶಾ ಆಲಂ ದರ್ಗಾದಲ್ಲಿ ಹಿಂದೂ ಸಾಧುಗಳು ಕವ್ವಾಲಿ ಹಾಡಿದ್ದಾರೆ. ಈ ಮೂಲಕ ದರ್ಗಾದಲ್ಲಿ ಏಕತೆಯ ಸಂದೇಶವನ್ನು ಸಾರಿದ್ದಾರೆ. ಕವ್ವಾಲಿಯಲ್ಲಿ ಮುಸ್ಲಿಂ ಸಮುದಾಯವದರು ಪಾಲ್ಗೊಂಡಿದ್ದು ವಿಶೇಷ.
ಏಕತೆಯ ಸಂದೇಶ: ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು - ದರ್ಗಾದಲ್ಲಿ ಹಿಂದೂ ಸಾಧುಗಳಿಂದ ಕವ್ವಾಲಿ
ಹಜರತ್ ಶಾ ಆಲಂ ದರ್ಗಾದಲ್ಲಿ ಹಿಂದೂ ಸಾಧುಗಳು ಕವ್ವಾಲಿ ಆಯೋಜಿಸುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿದ್ದಾರೆ.
![ಏಕತೆಯ ಸಂದೇಶ: ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು,Hindu sadhus qawwals performe in darga](https://etvbharatimages.akamaized.net/etvbharat/prod-images/768-512-13820313-thumbnail-3x2-qawwals.jpg)
ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು
ದರ್ಗಾಗೆ ಹಿಂದೂ ಸಮುದಾಯದವರು ಸೇರಿ ಎಲ್ಲ ಧರ್ಮದವರು ಭೇಟಿ ನೀಡುತ್ತಾರೆ. ಆದ್ರೆ ಇದೀಗ ಹಿಂದೂ ಸಾಧುಗಳು ಮುಂದುವರಿದು ಇಲ್ಲೇ ಕವ್ವಾಲಿ ಹಾಡಿದ್ದಾರೆ. ಮುಸ್ಲಿಂ ಸಮುದಾಯದವರು ಕೂಡ ಇದರಲ್ಲಿ ಪಾಲ್ಗೊಂಡಿದ್ದರು ಎಂದು ದರ್ಗಾದ ಮೌಲ್ವಿ ಸೋಬ್ ಖಾನ್ ಪಠಾಣ್ ತಿಳಿಸಿದ್ದಾರೆ.
ದರ್ಗಾದಲ್ಲಿ ಕವ್ವಾಲಿ ಹಾಡಿದ ಹಿಂದೂ ಸಾಧುಗಳು
ದೇಶದಲ್ಲಿ ಸಹೋದರತ್ವ ನೆಲೆಸಬೇಕು. ಎಲ್ಲರೂ ಒಟ್ಟಾಗ ಬದುಕಬೇಕು ಎಂದು ಮೌಲ್ವಿ ಆಶಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಿಂದೂ ಸಾಧುಗಳಿಗೆ ಹೂಗುಚ್ಛ ನೀಡಿ ದರ್ಗಾ ಸಿಬ್ಬಂದಿ ಸ್ವಾಗತಿಸಿದರು.