ಕರ್ನಾಟಕ

karnataka

ETV Bharat / bharat

ಕೇಂದ್ರ ಸಚಿವ ನಾರಾಯಣ್‌ ರಾಣೆ ತಲೆ ಕಡಿದರೆ 51 ಲಕ್ಷ ರೂ.ಬಹುಮಾನ: ವಿಶ್ವ ಹಿಂದೂ ಸೇನಾ ರಾಷ್ಟ್ರೀಯ ಅಧ್ಯಕ್ಷರ ಘೋಷಣೆ - ವಿಶ್ವ ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ

ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರೋಪ ಹೊತ್ತಿರುವ ಕೇಂದ್ರ ಸಚಿವ ನಾರಾಯಣ್‌ ರಾಣೆ ಅವರ ತಲೆ ಕಡಿದವರಿಗೆ 51 ಲಕ್ಷ ರೂಪಾಯಿ ನೀಡುವುದಾಗಿ ವಿಶ್ವ ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ ಅರುಣ್‌ ಪಾಠಕ್‌ ಘೋಷಿಸಿದ್ದಾರೆ.

Hindu outfit puts Rs 51 lakh bounty on Narayan Rane's head
ಕೇಂದ್ರ ಸಚಿವ ನಾರಾಯಣ್‌ ರಾಣೆ ತಲೆ ಕಡಿದರೆ 51 ಲಕ್ಷ ರೂ.ಬಹುಮಾನ; ವಿಶ್ವ ಹಿಂದೂ ಸೇನಾ ರಾಷ್ಟ್ರೀಯ ಅಧ್ಯಕ್ಷ ಘೋಷಣೆ

By

Published : Aug 26, 2021, 3:15 PM IST

ವಾರಾಣಸಿ(ಉತ್ತರ ಪ್ರದೇಶ): ಮಹಾರಾಷ್ಟ್ರ ಸಿಎಂ ಕೆನ್ನೆಗೆ ಬಾರಿಸುತ್ತೇನೆ ಎಂಬ ಹೇಳಿಕೆ ನೀಡಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕೇಂದ್ರ ಸಚಿವ ನಾರಾಯಣ್‌ ರಾಣೆ ವಿರುದ್ಧ ವಿಶ್ವ ಹಿಂದೂ ಸೇನಾದ ರಾಷ್ಟ್ರೀಯ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸಚಿವ ನಾರಾಯಣ್‌ ರಾಣೆ ಅವರ ತಲೆಯನ್ನು ಕಡಿದರೆ 51 ಲಕ್ಷ ರೂ. ಬಹುಮಾನ ಕೊಡುವುದಾಗಿ ವಿಹೆಚ್‌ಎಸ್‌ನ ರಾಷ್ಟ್ರೀಯ ಅಧ್ಯಕ್ಷ ಅರುಣ್‌ ಪಾಠಕ್‌ ಘೋಷಿಸಿದ್ದಾರೆ. ವಾರಾಣಸಿಯ ಭೇಲುಪುರ್‌ ಬನಾರಾಸ್‌ ಪ್ರದೇಶದಲ್ಲಿ ಸಚಿವ ರಾಣೆ ವಿರುದ್ಧ ಕೆಲವು ಅಕ್ಷೇಪಾರ್ಹ ಪೋಸ್ಟ್‌ಗಳನ್ನು ಅಂಟಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹರಿದಾಡಿವೆ.

ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಪಾಠಕ್‌, ಬಾಳಾಸಾಹೇಬ್​ ಅವರು ಶಿವ ಸೇನಾವನ್ನು ಕಟ್ಟಿದ್ದು, ಅವರ ಪುತ್ರ ಉದ್ಧವ್‌ ಠಾಕ್ರೆ ಇದೀಗ ಮುಖ್ಯಮಂತ್ರಿಯಾಗಿದ್ದಾರೆ. ಅಗ್ಗದ ಜನಪ್ರಿಯತೆಗಾಗಿ ಪಿಕ್ ಪಾಕೆಟ್ ಹಾಗೂ ಟಿಕೆಟ್ ಮಾರಾಟಗಾರನು ಬಾಳಾಸಾಹೇಬರ ಪುತ್ರನ ಬಗ್ಗೆ ಮಾತನಾಡುತ್ತಿದ್ದಾರೆ. ತನ್ನ ಮಿತಿಗಳನ್ನು ದಾಟಿದ್ದಾರೆ. ಇಂತಹ ಮನುಷ್ಯನ ಶಿರಚ್ಛೇದ ಮಾಡಬೇಕು. ಹೀಗೆ ಮಾಡುವವರಿಗೆ 51 ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ​ ರಾಣೆ ಮನೆಗೆ ನುಗ್ಗಿ ಕೊಲೆ ಮಾಡುವೆ: ಶಿವಸೇನೆ ಶಾಸಕನಿಂದ ಜೀವ ಬೆದರಿಕೆ

ನಾನು ನಿನಗೆ ಭರವಸೆ ನೀಡುತ್ತೇನೆ ನಾರಾಯಣ್ ರಾಣೆ, ನಿನ್ನ ಮರಣದ ನಂತರ ನಿನ್ನ ಚಿತಾಭಸ್ಮವನ್ನು ಕಾಶಿಯಲ್ಲಿ ಬಿಡಲು ಅವಕಾಶ ನೀಡುವುದಿಲ್ಲ. ನಿಮ್ಮ ಆತ್ಮವು ಶತಮಾನಗಳ ಕಾಲ ಅಲೆದಾಡುತ್ತಲೇ ಇರಬೇಕು ಎಂದು ಪಾಠಕ್ ಟ್ವೀಟ್ ಮಾಡಿದ್ದಾರೆ. ಈ ಹಿಂದೆಯೂ ಅರುಣ್‌ ಪಾಠಕ್‌ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು.

ABOUT THE AUTHOR

...view details