ಥಾಣೆ :ದೇಶಾದಾದ್ಯಂತ ಹಿಜಾಬ್ ವಿವಾದ ಭುಗಿಲೆದ್ದಿರುವ ನಡುವೆ ಇಲ್ಲೊಂದು ಕಡೆ ಹಿಂದು-ಮುಸ್ಲಿಂ ಬೇಧವಿಲ್ಲದೆ ಹುಡುಗಿಯರು ಒಟ್ಟಿಗೆ ಫುಟ್ಬಾಲ್ ಆಟ ಆಡುತ್ತಿದ್ದಾರೆ. ಈ ಘಟನೆಗೆ ಥಾಣೆಯ ಮುಂಬ್ರಾ ಸಾಕ್ಷಿಯಾಗಿದೆ.
ಕಳೆದ 5 ವರ್ಷಗಳಿಂದ ಹಿಂದು-ಮುಸ್ಲಿಂ ಬೇಧವಿಲ್ಲದೆ ಎಲ್ಲಾ ಧರ್ಮದ ಹುಡುಗಿಯರು ಒಟ್ಟಿಗೆ ಫುಟ್ಬಾಲ್ ಅಭ್ಯಾಸ ನಡೆಸುತ್ತಿದ್ದಾರೆ. ಇವರಿಗೆ ಹಿಜಾಬ್ ವಿವಾದ ಯಾವುದೇ ರೀತಿಯ ತೊಂದರೆ ಉಂಟು ಮಾಡಿಲ್ಲ. ಫುಟ್ಬಾಲ್ ಅಭ್ಯಾಸದ ವೇಳೆ ಮುಸ್ಲಿಂ ಹುಡುಗಿಯರು ಹಿಜಾಬ್ ಧರಿಸುತ್ತಿದ್ದು, ಹಿಂದು ಹುಡುಗಿಯರು ದುಪ್ಪಟ್ಟ ಧರಿಸಿ ಅಭ್ಯಾಸ ನಡೆಸುತ್ತಿದ್ದಾರೆ.