ಗ್ವಾಲಿಯರ್: ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆ ಮತ್ತು ಸಹ-ಸಂಚುಕೋರ ನಾರಾಯಣ್ ಆಪ್ಟೆ ಅವರ ಜೀವನ ಸಾಧನೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಧ್ಯಪ್ರದೇಶದಿಂದ ದೆಹಲಿಗೆ ವಾಹನ ರ್ಯಾಲಿ ಆರಂಭಿಸುವುದಾಗಿ ಅಖಿಲ ಭಾರತೀಯ ಹಿಂದೂ ಮಹಾಸಭಾ ತಿಳಿಸಿದೆ.
ಪ್ರಮುಖ ವಿಷಯ ಎಂದರೆ ಇದೇ ರೀತಿ ಈ ವರ್ಷದ ಜನವರಿಯಲ್ಲಿ, ಬಲಪಂಥೀಯ ಗುಂಪೊಂದು ಮಧ್ಯಪ್ರದೇಶದ ತನ್ನ ಕಚೇರಿಯಲ್ಲಿ ಗೋಡ್ಸೆ ಕುರಿತು ಅಧ್ಯಯನ ಕೇಂದ್ರವನ್ನು ತೆರೆದಿತ್ತು.ಆದರೆ ಜಿಲ್ಲಾಡಳಿತದ ಹಸ್ತಕ್ಷೇಪದ ನಂತರ ಎರಡು ದಿನಗಳ ಬಳಿಕ ಅದನ್ನು ಮುಚ್ಚಲಾಗಿತ್ತು.
ಗಾಂಧೀಜಿ ಹಂತಕ ಗೋಡ್ಸೆ ಕುರಿತು ಜಾಗೃತಿ ಅಭಿಯಾನ ಮಾಡಲಿದೆಯಂತೆ ಹಿಂದೂ ಮಹಾಸಭಾ ಹೆಚ್ಚಿನ ಓದಿಗಾಗಿ: ಗಾಂಧಿ ಹಂತಕ 'ಗೋಡ್ಸೆ' ಹೆಸರಲ್ಲಿ ಗ್ರಂಥಾಲಯ ತೆರೆದ ಹಿಂದೂ ಮಹಾಸಭಾ
ಈಗ, ಗೋಡ್ಸೆ ಮತ್ತು ಆಪ್ಟೆ ಬಗ್ಗೆ ಮಾಹಿತಿ ಪ್ರಸಾರ ಮಾಡಲು ಗ್ವಾಲಿಯರ್‌ನ ದೌಲತ್‌ಗಂಜ್‌ನಿಂದ ಯಾತ್ರೆ ತೆಗೆದುಕೊಳ್ಳಲು ಮಹಾಸಭಾ ತೀರ್ಮಾನ ಮಾಡಿದೆ.
ಹೆಚ್ಚಿನ ಓದಿಗಾಗಿ: ಗಾಂಧಿ ಕೊಂದ ಗೋಡ್ಸೆ ಹೆಸರಿನ ಗ್ರಂಥಾಲಯಕ್ಕೆ ಬೀಗ.. ಹಿಂದೂ ಮಹಾಸಭಾ ಕಚೇರಿ ಸುತ್ತ ಸೆಕ್ಷನ್ 144 ಜಾರಿ
ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಹಿಂದೂ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಪಾಂಡೆ, ಯಾತ್ರೆಯಲ್ಲಿ ದೇಶದ ಎಲ್ಲಾ ಕಡೆಯಿಂದ ಜನರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಏನೇ ಆದರೂ ಕೂಡ ಈ ಪ್ರಾರಂಭವಾಗುತ್ತದೆ. ನಾವು ನಮ್ಮ ಹೆಜ್ಜೆ ಹಿಂದಕ್ಕೆ ಇಡುವುದಿಲ್ಲ. ನಾವು ಸಾವರ್ಕರ್ ಅವರ ಅನುಯಾಯಿಗಳು ಮತ್ತು ಯಾವುದೇ ಬದಲಾವಣೆಗಳಿಲ್ಲದೆ ಯಾತ್ರೆಯು ಯೋಜಿಸಿದಂತೆ ನಡೆಯುತ್ತದೆ ಎಂದು ಕೂಡ ತಿಳಿಸಿದ್ದಾರೆ.