ಗ್ವಾಲಿಯರ್(ಮಧ್ಯಪ್ರದೇಶ):ಇಂದು ಮಹಾತ್ಮ ಗಾಂಧಿ ಅವರ ಜಯಂತಿ. ಈ ವೇಳೆ ಮಧ್ಯಪ್ರದೇಶದ ಗ್ವಾಲಿಯರ್ ಅನ್ನು ಉಲ್ಲೇಖಿಸುವುದು ಸಾಮಾನ್ಯವಾಗಿದೆ. ಏಕೆಂದರೆ ನಾಥೂರಾಂ ಗೋಡ್ಸೆ ಗಾಂಧೀಜಿಯನ್ನು ಕೊಲ್ಲಲು ಸಂಚು ರೂಪಿಸಿದ್ದ ಸ್ಥಳ ಗ್ವಾಲಿಯರ್.
ಈ ದಿನದಂದೇ 'ಗಾಂಧಿ ಮತ್ತು ಹುತಾತ್ಮ ಗೋಡ್ಸೆ, ಆಪ್ಟೆ' ಎಂಬ ವಿಚಾರ ಸಂಕಿರಣವನ್ನು ಹಿಂದೂ ಮಹಾಸಭಾ ಆಯೋಜಿಸಿದೆ. ಗೋಡ್ಸೆಯನ್ನು ಹುತಾತ್ಮ ಎಂದು ಕರೆಯುವ ಮೂಲಕ ಹಿಂದೂ ಮಹಾಸಭಾ ವಿವಾದ ಸೃಷ್ಟಿಸಿದೆ. ಇದರ ಜೊತೆಗೆ ನಾರಾಯಣ ಆಪ್ಟೆಯನ್ನೂ ಈ ವೇಳೆ ಸ್ಮರಿಸುತ್ತಿದೆ.
ದೇಶಾದ್ಯಂತ ಮಹಾತ್ಮ ಗಾಂಧಿಯ ಸ್ಮರಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಆದರೆ ಹಿಂದೂ ಮಹಾಸಭಾ ಗೋಡ್ಸೆಯನ್ನು ಸ್ಮರಿಸುವ ಕೆಲಸ ಮಾಡುತ್ತಿದೆ. ಈ ಕುರಿತು ಮಾತನಾಡಿರುವ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ರವಿ ಭಾರದ್ವಾಜ್, ಈ ವಿಚಾರ ಸಂಕಿರಣದಲ್ಲಿ ಗೋಡ್ಸೆ ಬಗ್ಗೆ ಯುವಕರು ಹೆಚ್ಚಾಗಿ ತಿಳಿದುಕೊಳ್ಳಬಹುದು ಎಂದಿದ್ದಾರೆ.