ಕರಾಚಿ:ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕ್ಷೌರದ ಅಂಗಡಿಯಲ್ಲಿ 31 ವರ್ಷದ ಹಿಂದೂ ಪತ್ರಕರ್ತನನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹಿಂದೂ ಪತ್ರಕರ್ತನ ಹತ್ಯೆ: ಅಪರಿಚಿತರಿಂದ ಕೃತ್ಯ - ಅಜಯ್ ಲಾಲ್ವಾನಿ
ಪಾಕಿಸ್ತಾನದಲ್ಲಿ 31 ವರ್ಷದ ಅಜಯ್ ಲಾಲ್ವಾನಿ ಎಂಬ ಹಿಂದೂ ಪತ್ರಕರ್ತನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಅಜಯ್ ಲಾಲ್ವಾನಿ ಮೃತ ಪತ್ರಕರ್ತ. ಈತ ಸುಕ್ಕೂರ್ ನಗರದ ಕ್ಷೌರಿಕನ ಅಂಗಡಿಯಲ್ಲಿ ಕುಳಿತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರ ರಕ್ತ ಸ್ರಾವವಾಗಿ ನರಳುತ್ತಿದ್ದ ಲಾಲ್ವಾನಿಯನ್ನು ಆಸ್ಪತ್ರೆಗೆ ದಾಖಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತ ಪತ್ರಕರ್ತನ ತಂದೆ ದಿಲೀಪ್ ಕುಮಾರ್,ಆತನಿಗೆ ಯಾರೂ ಶತ್ರಗಳಿರಲಿಲ್ಲ. ಕೊಲೆ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಹತ್ಯೆಯನ್ನು ಖಂಡಿಸಿ ಪತ್ರಕರ್ತರು ಪ್ರತಿಭಟಿಸಿ ಅಂತ್ಯಕ್ರಿಯೆಯ ನಂತರ ಮೆರವಣಿಗೆ ನಡೆಸಿದ್ದಾರೆ. ಏತನ್ಮಧ್ಯೆ, ಅಮೆರಿಕ ಮೂಲದ ಸ್ವತಂತ್ರ ಸಂಘಟನೆ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ (ಸಿಪಿಜೆ) ಹತ್ಯೆಯ ಸಂಪೂರ್ಣ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದೆ. ಘಟನೆ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.