ರತ್ಲಂ (ಮಧ್ಯಪ್ರದೇಶ):ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಸುರಾನಾ ಗ್ರಾಮದಲ್ಲಿ ಎರಡು ಸಮುದಾಯದ ನಡುವಣ ಪರಿಸ್ಥಿತಿ ಬಿಗಡಾಯಿಸಿದ್ದು, ಘರ್ಷಣೆ0ಉಲ್ಬಣಗೊಂಡಿದೆ. ಗ್ರಾಮದ 25ಕ್ಕೂ ಹೆಚ್ಚು ಹಿಂದೂ ಕುಟುಂಬಗಳು ಊರು ತೊರೆದು ಹೋಗುವುದಾಗಿ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿವೆ.
ಏನಿದು ಘಟನೆ?
ಗ್ರಾಮಸ್ಥ ಮುಖೇಶ್ ಜಾಟ್ ಹೇಳುವ ಪ್ರಕಾರ, ಅನೇಕ ತಲೆಮಾರುಗಳಿಂದ ಸುರಾನಾ ಗ್ರಾಮದಲ್ಲಿ ಎರಡೂ ಸಮುದಾಯಗಳು ಸೌಹಾರ್ದತೆಯಿಂದ ಬದುಕುತ್ತಿವೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಿಂದೂ ಕುಟುಂಬಗಳ ಮೇಲೆ ಹಲ್ಲೆ ಮತ್ತು ನಿಂದನೆಗಳು ಹೆಚ್ಚಾಗುತ್ತಿವೆ.
ಜನವರಿ 16ರಂದು ಮಯೂರ್ ಖಾನ್ ಎಂಬಾತ 100ಕ್ಕೂ ಹೆಚ್ಚು ಜನರೊಂದಿಗೆ ನನ್ನ ಮನೆಗೆ ಬಂದು ನಿಂದಿಸಿದ್ದಾನೆ. ಗ್ರಾಮವನ್ನು ತೊರೆಯುವಂತೆ ಬೆದರಿಕೆ ಹಾಕಿದ್ದಾನೆ. ಆದರೆ ನನ್ನ ಮೇಲೆ ಕೇಸ್ ದಾಖಲಿಸಲಾಗಿದೆ. ಹಿಂದೂಗಳ ಮೇಲೆ ನಕಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸುರಾನಾ ಗ್ರಾಮದಲ್ಲಿ ಮತ್ತೊಂದು ಸಮುದಾಯದ ಸಂಖ್ಯೆ ಹೆಚ್ಚಿದ್ದು, ಅವರು ಇಲ್ಲಿ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳು ಹೆದರಿ ಈಗಾಗಲೇ ತಮ್ಮ ಮನೆಗಳ ಮುಂದೆ ಮನೆ ಮಾರಾಟಕ್ಕಿದೆ ಎಂಬ ಬೋರ್ಡ್‌ಗಳನ್ನು ಹಾಕಿದ್ದಾರೆ. ಈ ಗ್ರಾಮದಿಂದ ವಲಸೆ ಹೋಗುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಇನ್ನು ಮೂರು ದಿನದಲ್ಲಿ ಮನೆ, ದನ, ಗದ್ದೆಗಳನ್ನು ಬಿಟ್ಟು ಸೂರನ ಗ್ರಾಮದಿಂದ ವಲಸೆ ಹೋಗುವುದಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಎರಡು ಧರ್ಮಿಯರ ಮಧ್ಯೆ ಸಾಮರಸ್ಯ ಕದಡಲು ಮೆಡಿಕಲ್ ವಿದ್ಯಾರ್ಥಿನಿಯ ಫೋಟೋ ಎಡಿಟ್!
ವಿವಾದ ಶಾಂತಿಯುತವಾಗಿ ಬಗೆ ಹರಿಸಲಾಗುವುದು
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಕೋಮು ಗಲಭೆ ಸೃಷ್ಟಿಸಲು ಯಾರಿಗೂ ಬಿಡುವುದಿಲ್ಲ. ಅಕ್ರಮ ಒತ್ತುವರಿ ಮತ್ತಿತರ ಸಣ್ಣಪುಟ್ಟ ಸ್ಥಳೀಯ ಸಮಸ್ಯೆಗಳೇ ವಿವಾದಕ್ಕೆ ಕಾರಣವಾಗಿದ್ದು, ಶೀಘ್ರವೇ ಬಗೆಹರಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು, ಗ್ರಾಮದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗಿದ್ದು, ಎಸ್ಪಿ ಮತ್ತು ಡಿಸಿ ಗ್ರಾಮಕ್ಕೆ ಭೇಟಿ ನೀಡಿ ಎರಡೂ ಸಮುದಾಯದ ನಡುವೆ ಮಾತುಕತೆ ನಡೆಸಿದ್ದಾರೆ.