ಪೇಶಾವರ (ಪಾಕಿಸ್ತಾನ):ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿನ ಒಂದು ಶತಮಾನದಷ್ಟು ಹಳೆಯ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ಜನಸಮೂಹವನ್ನು ಕ್ಷಮಿಸಲು ಹಿಂದೂ ಸಮುದಾಯ ನಿರ್ಧರಿಸಿದೆ.
ಇದನ್ನೂ ಓದಿ:ಪಾಕಿಸ್ತಾನದಲ್ಲಿ ಹಿಂದೂ ದೇಗುಲ ಧ್ವಂಸ: 1997ರ ನಂತರ ನಡೆದ 2ನೇ ಅತಿ ದೊಡ್ಡ ದಾಳಿ!

ವಿವಾದವನ್ನು ಬಗೆಹರಿಸಲು ಸ್ಥಳೀಯ ಧರ್ಮಗುರುಗಳು ಮತ್ತು ಹಿಂದೂ ಸಮುದಾಯದ ಸದಸ್ಯರು ಶನಿವಾರ ಸಭೆ ನಡೆಸಿದರು. ಅನೌಪಚಾರಿಕವಾಗಿ 'ಜಿಗ್ರಾ' ಎಂದು ಕರೆಯಲ್ಪಡುವ ಸಂವಾದದ ಪ್ರಕಾರ, 1997 ರಲ್ಲಿ ನಡೆದ ದಾಳಿ ಮತ್ತು ಇದೇ ರೀತಿಯ ಘಟನೆಯ ಬಗ್ಗೆ ಆರೋಪಿಗಳು ಕ್ಷಮೆ ಯಾಚಿಸಿದ್ದಾರೆ. ಮುಸ್ಲಿಂ ಧರ್ಮಗುರುಗಳು ಹಿಂದೂಗಳಿಗೆ ಸಂಪೂರ್ಣ ರಕ್ಷಣೆ ಮತ್ತು ದೇಶದ ಸಂವಿಧಾನದ ಪ್ರಕಾರ ಅವರ ಹಕ್ಕುಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಧ್ವಂಸಗೊಂಡ ಹಿಂದೂ ದೇವಾಲಯ ಪುನರ್ ನಿರ್ಮಿಸುವಂತೆ ಪಾಕ್ ಸುಪ್ರೀಂ ಕೋರ್ಟ್ ಆದೇಶ!
ಆರೋಪಿಗಳನ್ನು ಬಂಧನದಿಂದ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಭೆಯಿಂದ ಸಮನ್ವಯ ಹೇಳಿಕೆಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗುವುದು. ಕಳೆದ ಡಿಸೆಂಬರ್‌ನಲ್ಲಿ ಮೂಲಭೂತವಾದಿ ಜಂಇಯ್ಯತುಲ್ ಉಲೆಮಾ-ಎ-ಇಸ್ಲಾಂ ಪಕ್ಷ (ಫಝಲುರ್ರಹ್ಮಾನ್ ಗುಂಪು)ದ ಸದಸ್ಯರು ಖೈಬರ್ ಪಖ್ತುಖ್ವಾ ಪ್ರಾಂತ್ಯ ಕರಾಕ್ ಜಿಲ್ಲೆಯ ಟೆರ್ರಿ ಗ್ರಾಮದ ಹಿಂದೂ ದೇವಾಲಯದ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದರು.