ಕರ್ನಾಟಕ

karnataka

ರಾಷ್ಟ್ರೀಯ ಭಾಷೆ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ: ಸಿಕ್ಕಿಂ ಸಿಎಂ ತಮಾಂಗ್

By

Published : Apr 4, 2021, 7:16 AM IST

ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರಾಡುವ ಭಾಷೆ. ಹೆಚ್ಚಿನ ಜನ ಈ ಭಾಷೆ ಮಾತನಾಡುವುದರಿಂದ ಅದಕ್ಕೆ ದೇಶವನ್ನು ಒಂದುಗೂಡಿಸುವ ಶಕ್ತಿ ಇದೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ತಿಳಿಸಿದ್ದಾರೆ.

ಪ್ರೇಮ್ ಸಿಂಗ್ ತಮಾಂಗ್
ಪ್ರೇಮ್ ಸಿಂಗ್ ತಮಾಂಗ್

ಗುಜರಾತ್: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ, ಅದನ್ನು ಬಲವಂತವಾಗಿ ಹೇರಿಕೆ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ರಾಷ್ಟ್ರೀಯ ಭಾಷೆ ದೇಶವನ್ನು ಒಂದುಗೂಡಿಸುತ್ತದೆ. ದೇಶಭಕ್ತರು ತಮ್ಮ ವಿಚಾರಗಳನ್ನು ಮುಕ್ತವಾಗಿ ಮುಂದಿಡಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೇಮ್ ಸಿಂಗ್

ಗುಜರಾತ್‌ನ ನವಸರಿಯಲ್ಲಿ ಶನಿವಾರ ನಡೆದ 'ಆಜಾದಿ ಕಾ ಅಮೃತ್ ಮಹೋತ್ಸವ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಆಡುವ ಭಾಷೆ. ಹೆಚ್ಚಿನ ಜನ ಈ ಭಾಷೆಯನ್ನು ಮಾತನಾಡುವುದರಿಂದ ಅದಕ್ಕೆ ದೇಶವನ್ನು ಒಂದುಗೂಡಿಸುವ ಶಕ್ತಿ ಇದೆ ಎಂದರು.

ಪ್ರಾಯೋಗಿಕವಾಗಿ ನೋಡುವುದಾದರೆ ಉತ್ತರ ಭಾರತದ ರಾಜ್ಯಗಳನ್ನು ಹೊರತುಪಡಿಸಿದರೆ ಕರ್ನಾಟಕ, ಪಂಜಾಬ್‌, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಂದಿ ಮಾತನಾಡುವವರಿಲ್ಲ. ಹೀಗಿರುವಾಗ ಹಿಂದಿ ರಾಷ್ಟ್ರಭಾಷೆಯಾಗಲು ಹೇಗೆ ಸಾಧ್ಯ? ಎನ್ನವ ಪ್ರಶ್ನೆ ಕೆಲವರಲ್ಲಿ ಮೂಡಿದೆ.

ABOUT THE AUTHOR

...view details