ನವದೆಹಲಿ: ಭಾರತದ ಗಣರಾಜ್ಯೋತ್ಸವ ಸಂಭ್ರಮ ಎಲ್ಲೆಡೆಯೂ ಆವರಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ದ್ವೀಪ ಪ್ರದೇಶಗಳಲ್ಲೂ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿರುವುದು ಮಾತ್ರವಲ್ಲದೇ ಹಿಮಾಲಯದಲ್ಲೂ ಭಾರಿ ಚಳಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ.
ಲಡಾಖ್ ಗಡಿಯಲ್ಲಿ ಇಂಡೋ-ಟಿಬೇಟನ್ ಬಾರ್ಡರ್ ಪೊಲೀಸ್ನ (ಐಟಿಬಿಪಿ) ಹಿಮವೀರ್ ತಂಡ ಸುಮಾರು 15 ಸಾವಿರ ಅಡಿಯಷ್ಟು ಎತ್ತರದಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದ್ದಾರೆ. ಅಲ್ಲಿರೋದು -35 ಡಿಗ್ರಿ ಸೆಂಟಿಗ್ರೇಡ್ ತಾಪಮಾನ. ಕೊರೆಯುವ ಚಳಿಯಲ್ಲಿಯೂ ತ್ರಿವರ್ಣ ಧ್ವಜ ಹಿಡಿದು ಐಟಿಬಿಪಿ ಸಿಬ್ಬಂದಿ ಪರೇಡ್ ನಡೆಸಿರುವುದು ಮೈ ನವಿರೇಳಿಸುವಂತಿದೆ.