ಕರ್ನಾಟಕ

karnataka

ETV Bharat / bharat

'ಆರೋಪ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ': ಸಬ್ಸಿಡಿ ವಿವಾದಕ್ಕೆ ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಸವಾಲು - Assam CM Himanta Biswa

ಕೇಂದ್ರ ಸರ್ಕಾರದ ಸಬ್ಸಿಡಿ ವಿಚಾರವಾಗಿ ಕಾಂಗ್ರೆಸ್​ ಸಂಸದ ಗೌರವ್​ ಗೊಗೊಯ್​ ಮತ್ತು ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಮಧ್ಯೆ ಎಕ್ಸ್​ನಲ್ಲಿ ಟಾಕ್​ ವಾರ್ ನಡೆದಿದೆ.

ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ
ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ

By ETV Bharat Karnataka Team

Published : Sep 14, 2023, 7:13 PM IST

ಗುವಾಹಟಿ:ಅಸ್ಸೋಂ ಮುಖ್ಯಮಂತ್ರಿ ಡಾ.ಹಿಮಂತ್​ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಶರ್ಮಾ ಭುಯಾನ್ ಅವರು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ 10 ಕೋಟಿ ರೂಪಾಯಿ ಸಬ್ಸಿಡಿ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನು ಸಾಬೀತು ಮಾಡಿದರೆ ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಪಡೆಯುವುದಾಗಿ ಸಿಎಂ ಶರ್ಮಾ ಸವಾಲು ಹಾಕಿದ್ದಾರೆ.

ಕಾಂಗ್ರೆಸ್​ ಸಂಸದ ಗೌರವ್ ಗೊಗೊಯ್ ಈ ಬಗ್ಗೆ ಎಕ್ಸ್​ನಲ್ಲಿ (ಹಿಂದಿನ ಟ್ವಿಟರ್) ಆಪಾದಿಸಿದ್ದು, ಭಾರತದ ರೈತರ ಆದಾಯವನ್ನು ದ್ವಿಗುಣಗೊಳಿಸಲು ಪಿಎಂಕೆಎಸ್​ವೈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆದರೆ ಅಸ್ಸೋಂನಲ್ಲಿ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಅವರು ತಮ್ಮ ಪ್ರಭಾವವನ್ನು ಬಳಸಿಕೊಂಡು ತಮ್ಮ ಪತ್ನಿಯ ಸಂಸ್ಥೆಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿಯಾಗಿ 10 ಕೋಟಿ ರೂಪಾಯಿ ಕೊಡಿಸಲಾಗಿದೆ. ಕೇಂದ್ರ ಸರ್ಕಾರದ ಯೋಜನೆಗಳು ಬಿಜೆಪಿಯನ್ನು ಶ್ರೀಮಂತಗೊಳಿಸುವ ಉದ್ದೇಶ ಹೊಂದಿವೆಯೇ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಶರ್ಮಾ, ನನ್ನ ಪತ್ನಿಯಾಗಲಿ ಅಥವಾ ಅವರು ನಂಟು ಹೊಂದಿರುವ ಯಾವುದೇ ಕಂಪನಿಯಾಗಲಿ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ಪಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಮರು ಟ್ವೀಟ್​ ಮಾಡಿರುವ ಗೊಗೊಯ್​, ಹಾಗಿದ್ದರೆ ಸರ್ಕಾರದ ವೆಬ್​ಸೈಟ್​ನಲ್ಲಿ ನಮೂದಾಗಿರುವ ಮಾಹಿತಿ ಸುಳ್ಳೇ ಎಂದು ದಾಖಲೆಯೊಂದನ್ನು ಹಂಚಿಕೊಂಡಿದ್ದಾರೆ.

ಮುಂದುವರಿದ ಟಾಕ್​ ವಾರ್​:ಈ ಬಗ್ಗೆ ಸಿಎಂ ಶರ್ಮಾ ಮತ್ತು ಗೊಗೊಯ್​ ಸರಣಿ ಟಾಕ್​ ವಾರ್​ ನಡೆಸಿದ್ದಾರೆ. ಗುರುವಾರ ಮತ್ತೆ ಈ ವಿಚಾರವಾಗಿ ಎಕ್ಸ್​ನಲ್ಲಿ ಟಾಕ್​ ವಾರ್​ ನಡೆಸಿರುವ ಇಬ್ಬರೂ, "ನಿನ್ನೆ ಹಿಮಂತ್​ ಬಿಸ್ವಾ ಶರ್ಮಾ ಅವರ ಪತ್ನಿಗೆ ಸರ್ಕಾರದ ಸಹಾಯಧನ ನೀಡಲಾಗಿದೆ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ದೂರು ನೀಡಿದ್ದಾರೆಯೇ?. ಪಿಯೂಷ್ ಗೋಯಲ್ ಅವರು ಸಂಸತ್ತಿಗೆ ನೀಡಿರುವ ಉತ್ತರ ಸುಳ್ಳೇ. ಹಾಗಿದ್ದರೆ, ಈ ಬಗ್ಗೆ ಇಬ್ಬರೂ ಸ್ಪಷ್ಟಪಡಿಸಬೇಕು ಎಂದು ಕೋರಿದ್ದಾರೆ.

ಸಂಸತ್ತಿಗೆ ಪಿಯೂಷ್ ಗೋಯಲ್ ಅವರ ಉತ್ತರವನ್ನು ಉಲ್ಲೇಖಿಸಿ ಉತ್ತರಸಿರುವ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಕೇಂದ್ರ ಸರ್ಕಾರ ಹೇಳಿರುವ ಕಂಪನಿಗೆ ಹಣವನ್ನು ಬಿಡುಗಡೆ ಮಾಡಿಲ್ಲ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ನನ್ನ ಪತ್ನಿ ಅಥವಾ ಆಕೆಗೆ ಸಂಬಂಧಿಸಿದ ಕಂಪನಿಯಾಗಲಿ ಸರ್ಕಾರದಿಂದ ಯಾವುದೇ ಅನುದಾನ ಪಡೆದಿಲ್ಲ. ಈ ಬಗ್ಗೆ ಬೇಡಿಕೆಯಿಟ್ಟಿಲ್ಲ. ಯಾರಾದರೂ ಇದಕ್ಕೆ ಸಾಕ್ಷ್ಯವನ್ನು ನೀಡಿದರೆ, ಸಾರ್ವಜನಿಕ ಜೀವನದಿಂದ ನಿವೃತ್ತಿ ಹೊಂದುವೆ. ಜೊತೆಗೆ ಯಾವುದೇ ಶಿಕ್ಷೆಯನ್ನು ಸ್ವೀಕರಿಸಲು ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.

ತಮ್ಮ ಪತ್ನಿ ವಿರುದ್ಧದ ಆರೋಪ ಸಾಬೀತಾದರೆ ಸಾರ್ವಜನಿಕ ಜೀವನ ತೊರೆಯುವುದಾಗಿ ಹೇಳಿದ ಬಳಿಕ, ಮುಖ್ಯಮಂತ್ರಿಗಳು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆಯೇ? ಪಿಯೂಷ್ ಗೋಯಲ್ ಅವರು ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿಗೆ ಮಾತ್ರ ಅನುದಾನವನ್ನು ಅನುಮೋದಿಸಿದ್ದಾರೆ. ಆದರೆ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೂ ಎಷ್ಟು ಬಿಜೆಪಿ ರಾಜಕಾರಣಿಗಳು ತಮ್ಮ ಕುಟುಂಬವನ್ನು ಉದ್ದಾರ ಮಾಡಲು ಸರ್ಕಾರಿ ಯೋಜನೆಯನ್ನು ಬಳಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸಿಎಂ ಶರ್ಮಾ ಅವರು ಪ್ರತಿಕ್ರಿಯಿಸಿ, ನೀವು ಹೇಳಿಕೆಯನ್ನು ಬದಲಿಸಬೇಡಿ. ಎಲ್ಲಾ ಬಿಜೆಪಿ ನಾಯಕರಿಗೆ ತಮ್ಮದೇ ಆದ ಕಂಪನಿಯನ್ನು ನಡೆಸುವ ಹಕ್ಕಿದೆ. ಅರ್ಹತೆ ಹೊಂದಿದ್ದರೆ ಯಾರು ಬೇಕಾದರೂ ಸಬ್ಸಿಡಿಗಳನ್ನು ಪಡೆಯಬಹುದು. ಈ ಪ್ರಕರಣದಲ್ಲಿ ನನ್ನ ಪತ್ನಿ ಯಾವುದೇ ಸಬ್ಸಿಡಿಗೆ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:ರಾಜಸ್ಥಾನದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ದ್ವೇಷ ಭಾಷಣ ಮಾಡಿದ ಆರೋಪ; ಪ್ರಕರಣ ದಾಖಲು

ABOUT THE AUTHOR

...view details