ಗುವಾಹಟಿ: ಅಸ್ಸೋಂನ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಜ್ಯದಲ್ಲಿ ಕೇಸರಿ ಪಡೆಯ ಪ್ರಮುಖ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರೇ ಸಿಎಂ ಎಂದು ಘೋಷಿಸಲಾಗಿದೆ.
ಅಸ್ಸೋಂ ನೂತನ ಸಿಎಂ ಆಗಿ ಹಿಮಂತ ಬಿಸ್ವಾ ಆಯ್ಕೆ.. ನಾಳೆ ಪ್ರಮಾಣವಚನ - Himanta Biswa Sarma selected as next CM of Assam
ಅಸ್ಸೋಂನ ನೂತನ ಸಿಎಂ ಆಗಿ ಹಿಮಂತ ಬಿಸ್ವಾ ಶರ್ಮಾರನ್ನು ಆಯ್ಕೆ ಮಾಡಲಾಗಿದ್ದು, ನಾಳೆ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಹೊರಬಿದ್ದಿದೆ.
![ಅಸ್ಸೋಂ ನೂತನ ಸಿಎಂ ಆಗಿ ಹಿಮಂತ ಬಿಸ್ವಾ ಆಯ್ಕೆ.. ನಾಳೆ ಪ್ರಮಾಣವಚನ Himanta Biswa Sarma selected as next CM of Assam](https://etvbharatimages.akamaized.net/etvbharat/prod-images/768-512-11694134-thumbnail-3x2-megha.jpg)
ಅಸ್ಸೋಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಹತ್ವದ ಗೆಲುವು ದಾಖಲಿಸಿತ್ತಾದರೂ ಎಲೆಕ್ಷನ್ಗೂ ಮುಂಚೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಹೀಗಾಗಿ ಫಲಿತಾಂಶ ಬಂದು ವಾರ ಕಳೆದರೂ ಅಧಿಕಾರದ ಚುಕ್ಕಾಣಿ ಹಿಡಿಯುವ ವ್ಯಕ್ತಿ ಯಾರೆಂಬುದೇ ಕುತೂಹಲವಾಗಿ ಉಳಿದಿತ್ತು. ಅಸ್ಸೋಂ ಹಾಲಿ ಸಿಎಂ ಸರ್ಬಾನಂದ ಸೊನೊವಾಲ್ ಹಾಗೂ ಆರೋಗ್ಯ, ವಿತ್ತ ಮತ್ತು ಶಿಕ್ಷಣ ಸಚಿವರಾಗಿದ್ದ ಹಿಮಂತ ಬಿಸ್ವಾ ಶರ್ಮಾ- ಈ ಇಬ್ಬರೂ ನೂತನ ಮುಖ್ಯಮಂತ್ರಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು.
ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಹೆಸರನ್ನು ಅಂತಿಮಗೊಳಿಸಲಾಗಿದೆ. ನಾಳೆ ಶರ್ಮಾ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.