ಗುವಾಹಟಿ (ಅಸ್ಸೋಂ): ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಜನ್ಮ ಜಾತಿಯ ಆಧಾರದ ಮೇಲೆ ಉದ್ಯೋಗವನ್ನು ವ್ಯವಹರಿಸುವ ಭಗವದ್ಗೀತೆಯ ಶ್ಲೋಕವನ್ನು ತಪ್ಪಾದ ಅನುವಾದ ಮಾಡಿ, ಪೋಸ್ಟ್ ಮಾಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಶ್ಲೋಕವನ್ನು ಅಪ್‌ಲೋಡ್ ಮಾಡಿದ್ದು, ತಮ್ಮ ತಂಡದ ಸದಸ್ಯರೇ ಮತ್ತು ಅದನ್ನು ಗಮನಿಸಿ ತಕ್ಷಣ ಅದನ್ನು ಅಳಿಸಿ ಹಾಕಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
"ವಾಡಿಕೆಯಂತೆ ನಾನು ಪ್ರತಿದಿನ ಬೆಳಗ್ಗೆ ನನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಭಗವದ್ಗೀತೆಯ ಒಂದು ಶ್ಲೋಕವನ್ನು ಅಪ್‌ಲೋಡ್ ಮಾಡುತ್ತೇನೆ. ಇಲ್ಲಿಯವರೆಗೆ, ನಾನು 668 ಶ್ಲೋಕಗಳನ್ನು ಪೋಸ್ಟ್ ಮಾಡಿದ್ದೇನೆ. ಇತ್ತೀಚೆಗೆ ನನ್ನ ತಂಡದ ಸದಸ್ಯರೊಬ್ಬರು 18ನೇ ಅಧ್ಯಾಯ, 44ರಿಂದ ತೆಗೆದುಕೊಳ್ಳಲಾಗಿದ್ದ ಶ್ಲೋಕವನ್ನು ತಪ್ಪಾದ ಅನುವಾದದೊಂದಿಗೆ ಪೋಸ್ಟ್ ಮಾಡಿದ್ದಾರೆ" ಎಂದು ಸಿಎಂ ಹಿಮಂತ ಎಕ್ಸ್ ಖಾತೆಯ ಮೂಲಕ ಹೇಳಿದ್ದಾರೆ.