ಶಿಮ್ಲಾ/ಹಿಮಾಚಲ ಪ್ರದೇಶ:ಹಿಮಾಚಲ ಪ್ರದೇಶದಲ್ಲಿ ಕಳೆದ 36 ಗಂಟೆಗಳಲ್ಲಿ ವಿಪರೀತ ಮಳೆಯಿಂದಾಗಿ ಕನಿಷ್ಠ 10 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಕಳೆದ 130 ದಿನಗಳಲ್ಲಿ 432 ಜನರು ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದಿದೆ.
ಮಳೆಯಿಂದ ಸಾಕಷ್ಟು ಮನೆಗಳಿಗೆ ಹಾನಿ ಉಂಟಾಗಿದ್ದು, ಬೆಳೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ 1,108 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಭಾರಿ ಮಳೆಯಿಂದಾಗಿ 9 ಗೋಶಾಲೆಗಳು ಸೇರಿದಂತೆ 16 ಮನೆಗಳು ಧ್ವಂಸಗೊಂಡಿವೆ. ಭೂಕುಸಿತದಿಂದಾಗಿ 123 ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ. ಮೂಲಗಳ ಪ್ರಕಾರ ಹಮೀರ್‌ಪುರದಲ್ಲಿ 18 ರಸ್ತೆಗಳು, ಮಂಡಿಯಲ್ಲಿ 9, ಕಾಂಗ್ರಾದಲ್ಲಿ 6 ರಸ್ತೆಗಳು ಬಂದ್ ಆಗಿವೆ.