ಧರ್ಮಶಾಲಾ (ಹಿಮಾಚಲ ಪ್ರದೇಶ): ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರೆ ಅಂತಹ ಮನೆ, ಅವರ ಮೇಲೆ ಗೌರವ ಮತ್ತ ಭಯ ಇರುತ್ತದೆ. ಈ ವಿಚಾರವನ್ನೇ ಬಳಸಿಕೊಂಡು ಇಲ್ಲಿನ ಕಾಂಗ್ರಾ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಖನಿಯಾರಾದ ತಾರಪದ ಗ್ರಾಮದ ವ್ಯಕ್ತಿಯೊಬ್ಬ ಕಳೆದ ಒಂದೂವರೆ ವರ್ಷಗಳಿಂದ ವಂಚನೆ ಮಾಡುತ್ತಿದ್ದ. ಈಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸವಿದ್ದು, ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಆರೋಪಿ ಮಹಾರಾಷ್ಟ್ರದ ನಿವಾಸಿ ವಿವೇಕ್ ಹೀರಾ ಸಿಂಗ್ ರಾಥೋಡ್ ಎಂದು ಗುರುತಿಸಲಾಗಿದೆ. ಆರೋಪಿಯು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ರಹಸ್ಯ ಅಧಿಕಾರಿ ಎಂದು ಬಿಂಬಿಸಿಕೊಂಡು ಓಡಾಡುತ್ತಿದ್ದ. ಐಪಿಎಸ್ ಅಧಿಕಾರಿಯಂತೆ ಪೋಸು ಕೊಡುತ್ತಿದ್ದ ವಿವೇಕ್ ಕುಮಾರ್ ಬಗ್ಗೆ ಗುಪ್ತಚರ ಇಲಾಖೆಯಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಗುಪ್ತಚರ ಇಲಾಖೆಯ ಮಾಹಿತಿ ಆಧರಿಸಿ ಸಿವಿಲ್ ಡ್ರೆಸ್ನಲ್ಲಿ ಪೊಲೀಸರು ವಿವೇಕ್ ಕುಮಾರ್ ಮನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಆತ ಜಗಳವಾಡಿದ್ದರಿಂದ ಸೇನೆಯ ಸಹಾಯದಿಂದ ಕಾರ್ಯಾಚರಣೆ ಮಾಡಿದ್ದಾರೆ. ಆತನಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸದಸ್ಯ ಎಂಬ ನಕಲಿ ಗುರುತಿನ ಚೀಟಿ, ಪಿಸ್ತೂಲ್ ಕವರ್, ಎರಡು ವಾಕಿ ಟಾಕಿ, ಬೈಕ್ ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ಈ ಹಿಂದೆ ಧರ್ಮಶಾಲಾದಲ್ಲಿ ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದು, ನಂತರ ನಕಲಿ ಗುರುತಿನ ಚೀಟಿಯನ್ನು ಮಾಡಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಇದಾದ ನಂತರ, ಐಪಿಎಸ್ ಅಧಿಕಾರಿಯಾದ ನಂತರ, ಅವರು ರಾತ್ರಿಯಿಡೀ ಖನಿಯಾರ ಮತ್ತು ಧರ್ಮಶಾಲಾ ಪ್ರದೇಶಗಳಲ್ಲಿ ದಾಳಿ ನಡೆಸುತ್ತಿದ್ದರು. ದಾಳಿಯ ವೇಳೆ ವಶಕ್ಕೆ ಪಡೆದ ಮಾದಕ ವಸ್ತುಗಳನ್ನು ಸಿಗರೇಟಿನ ರೀತಿ ಮಾಡಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.