ಕರ್ನಾಟಕ

karnataka

ETV Bharat / bharat

ಹಿಮಾಚಲ ಪ್ರದೇಶದಲ್ಲಿ ಭೂಕುಸಿತ: 7 ಮೃತದೇಹಗಳು ಪತ್ತೆ, ಮುಂದುವರೆದ ಶೋಧ ಕಾರ್ಯಾಚರಣೆ - ಲಾಹೌಲ್-ಸ್ಪಿಟಿಯ ಟೊನ್ಜಿಂಗ್ ನಲ್ಲಾ

ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಲಾಹೌಲ್-ಸ್ಪಿಟಿಯ ಟೊನ್ಜಿಂಗ್ ನಲ್ಲಾ ಪ್ರದೇಶದಲ್ಲಿ ಈವರೆಗೆ ಒಟ್ಟು ಏಳು ಮಂದಿಯ ಶವ ಹೊರತೆಗೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

7 ಶವ ಪತ್ತೆ
Himachal landslide

By

Published : Jul 29, 2021, 12:33 PM IST

ಶಿಮ್ಲಾ(ಹಿಮಾಚಲ ಪ್ರದೇಶ):ಭಾರಿ ಮಳೆ ಹಿನ್ನೆಲೆ ಲಾಹೌಲ್-ಸ್ಪಿಟಿಯ ಟೊನ್ಜಿಂಗ್ ನಲ್ಲಾ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ನಾಪತ್ತೆಯಾಗಿದ್ದ 10 ಮಂದಿ ಪೈಕಿ ಈವರೆಗೆ ಒಟ್ಟು ಏಳು ಮಂದಿಯ ಮೃತದೇಹಗಳು ಪತ್ತೆಯಾಗಿವೆ.

ಹಿಮಾಚಲಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬುಧವಾರ ಹಲವೆಡೆ ದಿಢೀರ್‌ ಭೂಕುಸಿತ ಮತ್ತು ಪ್ರವಾಹ ಉಂಟಾಗಿತ್ತು. ಅಷ್ಟೇ ಅಲ್ಲದೆ ಬುಡಕಟ್ಟು ಜಿಲ್ಲೆ ಲಾಹೌಲ್ - ಸ್ಪಿಟಿಯಲ್ಲಿ ಮೇಘ ಸ್ಫೋಟ ಸಹ ಸಂಭವಿಸಿದ್ದು, ಭಾರಿ ನಷ್ಟ ಉಂಟಾಗಿದೆ. ಈ ವೇಳೆ ಅನೇಕರು ನಾಪತ್ತೆಯಾಗಿದ್ದಾರೆ. ಎನ್‌ಡಿಆರ್‌ಎಫ್ ತಂಡಗಳು ಪ್ರಸ್ತುತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ cloudburst: ನಾಲ್ವರು ಸಾವು, 9 ಮಂದಿ ನಾಪತ್ತೆ!

ಟೊನ್ಜಿಂಗ್ ನಲ್ಲಾದಲ್ಲಿ ಉಂಟಾದ ಪ್ರವಾಹದಲ್ಲಿ 10 ಜನರು ನಾಪತ್ತೆಯಾಗಿದ್ದರು. ಬುಧವಾರ ಬೆಳಗ್ಗೆಯಿಂದಲೇ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ತಂಡಗಳು ಶೋಧಿಸುತ್ತಿದ್ದು, ನಿನ್ನೆ ಸಂಜೆ 7 ಜನರ ಮೃತದೇಹಗಳನ್ನು ಪತ್ತೆ ಮಾಡಲಾಗಿದೆ. ನಿರಂತರ ಮಳೆಯಿಂದಾಗಿ ರಾಜ್ಯದ ಅನೇಕ ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ.

ABOUT THE AUTHOR

...view details