ಶಿಮ್ಲಾ:ಏಕಪಕ್ಷೀಯವಾಗಿ ಹಠಾತ್ ಎಂದು ತನ್ನ ಎರಡು ಎಸಿಸಿ ಸಿಮೆಂಟ್ ಘಟಕ ಬಂದ್ ಮಾಡಿದ ಕ್ರಮ ಖಂಡಿಸಿ ಘಟಕದ ಮಾಲೀಕರಾದ ಬಿಲಿಯನೇರ್ ಗೌತಮ್ ಅದಾನಿಗೆ ಹಿಮಾಚಲ ಪ್ರದೇಶದ ಹೊಸ ಕಾಂಗ್ರೆಸ್ ಸರ್ಕಾರ ನೋಟಿಸ್ ಜಾರಿ ಮಾಡಿದೆ. ಅದಾನಿ ಒಡೆತನ ಬರ್ಮನ (ಬಿಲಸ್ಪುರ್) ಮತ್ತು ದರ್ಲಘಟ್ (ಸೊಲನ್) ಘಟಕವನ್ನು ಸಾರಿಗೆ ಕಾರಣ ನೀಡಿ ಡಿ. 15ರಿಂದ ಬಂದ್ ಮಾಡಿದ್ದರು.
ಇದರಿಂದ ಸಾವಿರಾರು ನೌಕರರು ಬೀದಿ ಪಾಲಾಗಿದ್ದಾರೆ. ಈ ಸಂಬಂಧ ರಾಜ್ಯ ಕೈಗಾರಿಕೋದ್ಯಮ ಇಲಾಖೆ ನೋಟಿಸ್ ಜಾರಿ ಮಾಡಿದೆ. ಈ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ನೂತನ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದರು. ಪ್ರಧಾನ ಕಾರ್ಯದರ್ಶಿ ಆರ್ಡಿ ದೈಮನ್ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಬಿಲಸ್ಪುರ್ ಮತ್ತು ಸೊಲನ್ನ ಡಿಸಿಗಳು ಕೂಡ ಭಾಗಿಯಾಗಿದ್ದರು.
ನಿಯಮ ಉಲ್ಲಂಘನೆ ನಿರ್ದೇಶನದ ಆಧಾರದ ಮೇಲೆ ಕೈಗಾರಿಕಾ ಇಲಾಖೆ ಸ್ಥಾವರಕ್ಕೆ ನೋಟಿಸ್ ಜಾರಿ ಮಾಡಿದೆ. ಘಟಕವನ್ನು ಬಂದ್ ಮಾಡುವ ಕುರಿತು ಸರ್ಕಾರಕ್ಕಾಗಲಿ ಅಥವಾ ಸ್ಥಳೀಯ ಆಡಳಿತಕ್ಕಾಗಲಿ ಮಾಹಿತಿ ನೀಡಿಲ್ಲ. ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಿ ಭೂಮಿಯನ್ನು ನೀಡಿರುತ್ತದೆ. ಇಂತಹ ಸಂದರ್ಭದಲ್ಲಿ ಏಕಾಏಕಿ ಇಂತಹ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.