ಕರ್ನಾಟಕ

karnataka

ETV Bharat / bharat

ಹಿಮಾಚಲ ಪ್ರದೇಶದಲ್ಲಿ ಅಗ್ನಿ ನರ್ತನ: 27 ಮನೆಗಳು, ಎರಡು ದೇವಾಲಯ, 26 ದನಗಳು ಬೆಂಕಿಗಾಹುತಿ - ಹಿಮಾಚಲ ಸಿಎಂ ಜೈರಾಮ್ ಠಾಕೂರ್

ಹಿಮಾಚಲ ಪ್ರದೇಶದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿ 27 ಮನೆಗಳು, ಎರಡು ದೇವಾಲಯ, 26 ದನಗಳು ಬೆಂಕಿಗಾಹುತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

himachal cm jairam thakur on mazhan fire incident
ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಅಗ್ನಿ ಅವಘಡ: 27 ಮನೆಗಳು, ಎರಡು ದೇವಾಲಯ ಸುಟ್ಟು ಭಸ್ಮ

By

Published : Dec 12, 2021, 12:36 PM IST

Updated : Dec 12, 2021, 12:57 PM IST

ಕುಲ್ಲು(ಹಿಮಾಚಲ ಪ್ರದೇಶ): ಭಾರಿ ಅಗ್ನಿ ಅವಘಡ ಸಂಭವಿಸಿ 27 ಮನೆಗಳು, ಎರಡು ದೇವಸ್ಥಾನಗಳು ಬೆಂಕಿಗಾಹುತಿಯಾಗಿರುವುದು ಮಾತ್ರವಲ್ಲದೇ ಸುಮಾರು 26 ದನಗಳು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಸಂಭವಿಸಿದೆ.

ಸಾಯಿಂಜ್ ಕಣಿವೆಯಲ್ಲಿರುವ ಮಜಾನ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ಸುಮಾರು 9 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದು, ಶಾರ್ಟ್​ ಸರ್ಕ್ಯೂಟ್​ ಅವಘಡಕ್ಕೆ ಕಾರಣ ಎಂದು ಪ್ರಾಥಮಿಕ ಮೂಲಗಳು ಮಾಹಿತಿ ನೀಡಿವೆ.

ಕುಲ್ಲುವಿನಲ್ಲಿ ಅಗ್ನಿ ಅವಘಡ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಜೈರಾಮ್ ಠಾಕೂರ್ ಮಜಾನ್ ಗ್ರಾಮದಲ್ಲಿ ಬೆಂಕಿ ಅವಘಡದಿಂದ 27 ಮನೆಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ಅತ್ಯಂತ ದುಃಖಕರವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರ ನೀಡಲು ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಈ ಸಂದರ್ಭಗಳಲ್ಲಿ ಸಂತ್ರಸ್ತ ಕುಟುಂಬಗಳೊಂದಿಗೆ ನಾವಿದ್ದೇವೆ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಕೆಮಿಕಲ್ ಕ್ಲೋರಿನ್ ಲೀಕ್: ಫ್ಯಾಕ್ಟರಿ ಮಾಲೀಕ ಸಾವು, ಹಲವರಿಗೆ ಚಿಕಿತ್ಸೆ

Last Updated : Dec 12, 2021, 12:57 PM IST

ABOUT THE AUTHOR

...view details