ಶಿಮ್ಲಾ (ಹಿಮಾಚಲ ಪ್ರದೇಶ):ಈಗ ಹಿಮಾಚಲದಲ್ಲಿ ಮದ್ಯದ ಬಾಟಲಿಗಳ ಮೇಲೂ ಹಾಲಿನ ಸೆಸ್ ವಿಧಿಸಲಾಗುತ್ತದೆ. ಈ ಮೂಲಕ ಮದ್ಯದ ಬೆಲೆ ಬಲು ದುಬಾರಿಯಾಗಲಿದೆ. ಹೌದು, ಸಿಎಂ ಸುಖವಿಂದರ್ ಸುಖು ಶುಕ್ರವಾರ ತಮ್ಮ ಮೊದಲ ಬಜೆಟ್‌ನಲ್ಲಿ ಈ ಘೋಷಣೆ ಮಾಡಿದ್ದಾರೆ. 2023-24ನೇ ಹಣಕಾಸು ವರ್ಷದ ಬಜೆಟ್ ಮಂಡಿಸಿದ ಮುಖ್ಯಮಂತ್ರಿಗಳು, ಹೊಸ ಅಬಕಾರಿ ನೀತಿ ತಂದಿದ್ದು, ಇದರಿಂದ ಸರ್ಕಾರದ ಆದಾಯ ಹೆಚ್ಚುವುದರ ಜೊತೆಗೆ ಹೈನುಗಾರಿಕೆಗೂ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಪ್ರತಿ ಬಾಟಲಿಯ ಮೇಲೆ ರೂ.10 ಹಾಲಿನ ಸೆಸ್:ವಾಸ್ತವವಾಗಿ ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ರಾಜ್ಯದ ಹಾಲು ಉತ್ಪಾದಕರ ಆದಾಯವನ್ನು ಹೆಚ್ಚಿಸುವ ಭರವಸೆ ನೀಡಿತ್ತು. ಇದರ ಅಡಿ ಸರ್ಕಾರವು ಹಾಲು ಉತ್ಪಾದಕರಿಗೆ ಹಸುವಿನ ಹಾಲು ಲೀಟರ್‌ಗೆ 80 ರೂ ಮತ್ತು ಎಮ್ಮೆಯ ಹಾಲು ಲೀಟರ್‌ಗೆ 100 ರೂ. ಆಗಿದೆ. ಜಾನುವಾರು ಸಾಕಣೆದಾರರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮದ್ಯದ ಬಾಟಲಿ ಮೇಲೆ 10 ರೂ. ಹಾಲಿನ ಸೆಸ್ ವಿಧಿಸಲು ಈಗ ಸರ್ಕಾರ ನಿರ್ಧರಿಸಿದೆ. ಹಾಲಿನ ಸೆಸ್ನಿಂದ ಬರುವ ಆದಾಯವನ್ನು ಹಾಲು ಉತ್ಪಾದಕರ ಆದಾಯ ಹೆಚ್ಚಿಸಲು ಮಾತ್ರ ವಿನಿಯೋಗಿಸಲಾಗುವುದು ಎಂದು ಸಿಎಂ ಸಿಎಂ ಸುಖವಿಂದರ್ ಸುಖು ಹೇಳಿದರು.
ಈಗಾಗಲೇ ಮದ್ಯದ ಮೇಲೆ ವಿಧಿಸಲಾಗಿತ್ತು ಹಸುವಿನ ಸೆಸ್:ಹಿಮಾಚಲದ ಹಿಂದಿನ ಬಿಜೆಪಿ ಸರ್ಕಾರವೂ ಮದ್ಯದ ಮೇಲೆ ಹಸುವಿನ ಸೆಸ್ ವಿಧಿಸಿತ್ತು ಎಂಬುದು ಗಮನಾರ್ಹ. ಇದು ಪ್ರಸ್ತುತ ಶೇ ಎರಡೂವರೆಯಷ್ಟಿತ್ತು. ರಾಜ್ಯದಲ್ಲಿ ಗೋವುಗಳ ಪ್ರಚಾರಕ್ಕಾಗಿ ಹಸುವಿನ ಸೆಸ್ ಅನ್ನು ಬಳಸಲಾಗುತ್ತದೆ. ಅಂದರೆ, ಪ್ರತಿ ಬಾಟಲಿ ಮದ್ಯದ ಮೇಲೆ 2.5 ಪ್ರತಿಶತ ಹಸುವಿನ ಸೆಸ್ ಜೊತೆಗೆ ಈಗ 10 ರೂಪಾಯಿ ಹಾಲಿನ ಸೆಸ್ ಕೂಡ ಪಾವತಿಸಬೇಕಾಗುತ್ತದೆ. ಇದರ ನೇರ ಪರಿಣಾಮ ಮದ್ಯ ಗ್ರಾಹಕರ ಮೇಲೆ ಆಗಲಿದ್ದು, ಇದರಿಂದ ಮದ್ಯ ದುಬಾರಿಯಾಗಲಿದೆ. ಹಾಲಿನ ಸೆಸ್ ವಿಧಿಸಿದ ಸರ್ಕಾರವು, ಪ್ರತಿವರ್ಷ 100 ಕೋಟಿ ರೂ. ಅನ್ನು ಪಶುಪಾಲಕರು ಮತ್ತು ಹಾಲು ಉತ್ಪಾದಕರ ಕಲ್ಯಾಣ ಯೋಜನೆಗಳಿಗೆ ಖರ್ಚು ಮಾಡಲಾಗುವುದು ಎಂದು ಘೋಷಿಸಿದೆ.