ಸಿರೋಹಿ(ರಾಜಸ್ಥಾನ ) : ಉತ್ತರ ಭಾರತದಲ್ಲಿ ಹಿಮಪಾತ ಮತ್ತು ಪಾಶ್ಚಿಮಾತ್ಯ ಅಡಚಣೆಗಳಿಂದಾಗಿ, ಚಳಿಗಾಲದ ಶೀತವು ರಾಜಸ್ಥಾನ ರಾಜ್ಯದಲ್ಲಿ ಮುಂದುವರಿಯುತ್ತದೆ.
ರಾಜಸ್ಥಾನ ರಾಜ್ಯದ ಅನೇಕ ಪ್ರದೇಶಗಳಲ್ಲಿ ಮಳೆ ಕಾಣಿಸಿಕೊಂಡರೆ, ಮತ್ತೊಂದೆಡೆ ಮೌಂಟ್ ಅಬುವಿನಲ್ಲಿ ಮಂಗಳವಾರ ಮೋಡ ಕವಿದ ವಾತಾವರಣವಿದ್ದು, ತಾಪಮಾನದಲ್ಲಿ ಏರಿಕೆ ಕಂಡಿದೆ. ಬುಧವಾರ, ಮೋಡಗಳ ಚಲನ, ವಲನ ಹೆಚ್ಚಾದಂತೆ ತಾಪಮಾನದಲ್ಲಿ ತೀವ್ರ ಕುಸಿತ ಕಂಡುಬಂದಿದೆ. ತಾಪಮಾನವು ಇದ್ದಕ್ಕಿದ್ದಂತೆ ಮೈನಸ್ 3.4 ಡಿಗ್ರಿಗೆ ಇಳಿದಿದೆ.