ಕರ್ನಾಟಕ

karnataka

ETV Bharat / bharat

ಹಿಜಾಬ್‌ ಬಗ್ಗೆ ಕುರಾನ್‌ನಲ್ಲಿ ಉಲ್ಲೇಖವಿದ್ದರೂ ಇಸ್ಲಾಂಗಿದು ಅನಿವಾರ್ಯವಲ್ಲ: ಕೇರಳ ರಾಜ್ಯಪಾಲ - ಇಸ್ಲಾಂನಲ್ಲಿ ಹಿಜಾಬ್ ಅನಿವಾರ್ಯವಲ್ಲ ಎಂದ ಆರಿಫ್ ಮೊಹಮ್ಮದ್ ಖಾನ್

ಹಿಜಾಬ್ ಕುರಿತು ನಡೆಯುತ್ತಿರುವ ಭಾರಿ ಚರ್ಚೆಯ ಮಧ್ಯೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದು, ಇಸ್ಲಾಂನಲ್ಲಿ ಹಿಜಾಬ್ ಕಡ್ಡಾಯಗೊಳಿಸಲಾಗಿಲ್ಲ. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವರು ಈ ವಿವಾದವನ್ನು ಮುಂದಿಟ್ಟಿದ್ದಾರೆ ಎಂದು ಹೇಳಿದರು.

Kerala Governor Arif Mohammad Khan
ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

By

Published : Feb 13, 2022, 10:26 AM IST

ಕೇರಳ: ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತು ತೀವ್ರ ವಿವಾದದ ಹಿನ್ನೆಲೆಯಲ್ಲಿ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಕ್ರಿಯಿಸಿದ್ದು, ಹಿಜಾಬ್ ಇಸ್ಲಾಂ ಧರ್ಮದ ಆಚರಣೆಯಲ್ಲಿ ಅಂತರ್ಗತವಾಗಿಲ್ಲ ಎಂದು ಹೇಳಿದ್ದಾರೆ.

'ಮಹಿಳೆಯರು ಧರಿಸುವ ಹಿಜಾಬ್ ಬಗ್ಗೆ ಕುರಾನ್‌ನಲ್ಲಿ 7 ಬಾರಿ ಉಲ್ಲೇಖವಿದೆ. ಆದ್ರೆ ಇದು ಇಸ್ಲಾಂಗೆ ಅವಶ್ಯವಾದ ಅಥವಾ ಅನಿವಾರ್ಯವಾದ ವಿಚಾರವಲ್ಲ' ಎಂದು ಅವರು ವಿಶೇಷ ಸಂದರ್ಶನದಲ್ಲಿ ತಿಳಿಸಿದರು.

ಪಟ್ಟಭದ್ರ ಹಿತಾಸಕ್ತಿಗಳು ಯುವ ಮುಸ್ಲಿಂ ಮಹಿಳೆಯರನ್ನು ಹಿಜಾಬ್ ಧರಿಸುವ ಹಕ್ಕಿಗಾಗಿ ಪ್ರತಿಭಟಿಸಲು ಪ್ರಚೋದಿಸುತ್ತಿವೆ. ಇಂಥವರು ಮುಸ್ಲಿಂ ಮಹಿಳೆಯರನ್ನು ಅಂಧಕಾರದ ಯುಗಕ್ಕೆ ತಳ್ಳಲು ಬಯಸುತ್ತಾರೆ. ಹಾಗಾಗಿ ಹೊರಗಿನವರ ಪ್ರಚೋದನೆಗೆ ಒಳಗಾಗಬೇಡಿ, ಓದಿನ ಕಡೆ ಗಮನಹರಿಸಿ ಎಂದು ವಿದ್ಯಾರ್ಥಿಗಳಿಗೆ ಆರಿಫ್ ಮೊಹಮ್ಮದ್ ಖಾನ್ ಮನವಿ ಮಾಡಿದರು.

ಇದನ್ನೂ ಓದಿ:ಹಿಜಾಬ್ ವಿವಾದ ನಮ್ಮ ಆಂತರಿಕ ವಿಚಾರ, ಅಭಿಪ್ರಾಯ ಹೊರಹಾಕುವುದು ಸರಿಯಲ್ಲ: ರಾಷ್ಟ್ರಗಳಿಗೆ ವಿದೇಶಾಂಗ ಇಲಾಖೆ ಸೂಚನೆ

For All Latest Updates

TAGGED:

ABOUT THE AUTHOR

...view details