ಮುಂಬೈ: ಕರ್ನಾಟಕದಲ್ಲಿ ಪ್ರಾರಂಭವಾಗಿರುವ ಹಿಜಾಬ್ ವಿವಾದ ಇದೀಗ ಮುಂಬೈಗೂ ಕಾಲಿಟ್ಟಿದೆ. ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆಯಾಗಿರುವ ಎಂಎಂಪಿ ಷಾ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸ್ಕಾರ್ಫ್, ವೇಲ್ ಮತ್ತು ಬುರ್ಖಾ ಧರಿಸಿ ಕಾಲೇಜಿಗೆ ಪ್ರವೇಶಿಸುವಂತಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡುರುವ ಕಾಲೇಜಿನ ಪ್ರಾಂಶುಪಾಲೆ ಲೀನಾ ರಾಜೆ, ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿ ತರಗತಿಗಳಿಗೆ ಹಾಜರಾಗಬೇಕು. ಸ್ಕಾರ್ಫ್, ವೇಲ್ ಮತ್ತು ಬುರ್ಖಾ ಧರಿಸಿ ಕಾಲೇಜಿಗೆ ಪ್ರವೇಶಿಸುವಂತಿಲ್ಲ. ನಮ್ಮ ಕಾಲೇಜ್ ನಿಯಮಾವಳಿ ಪ್ರಕಾರ ಹಿಜಾಬ್ ಮಾತ್ರವಲ್ಲದೇ, ಮುಸುಕನ್ನು ಕೂಡ ನಿಷೇಧಿಸಿದ್ದೇವೆ ಎಂದರು.