ನವದೆಹಲಿ:ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀತಿ ರೂಪಿಸುವ ಅಧಿಕಾರ ಸರ್ಕಾರಕ್ಕಿದೆ ಅದನ್ನು ನಿರಾಕರಿಸಲಾಗುವುದಿಲ್ಲ. ಸರ್ಕಾರಗಳು ಶಾಲಾ ಸಮವಸ್ತ್ರ ನೀತಿ ರೂಪಿಸುವ ಅಧಿಕಾರ ಹೊಂದಿವೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ 6ನೇ ದಿನದ ವಿಚಾರಣೆ ವೇಳೆ, ನ್ಯಾಯಮೂರ್ತಿ ಹೇಮಂತ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಂ ಸಮುದಾಯದ ವಿರುದ್ಧ ಪರೋಕ್ಷವಾಗಿ ತಾರತಮ್ಯ ಮಾಡಲಾಗುತ್ತಿದೆ ಎಂದು ಫಿರ್ಯಾದುದಾರರ ಪರವಾಗಿ ಹಿರಿಯ ವಕೀಲರಾದ ಹುಜೇಫಾ ಅಹ್ಮದಿ, ರಾಜೀವ್ ಧವನ್, ಆದಿತ್ಯ ಸೋಂಧಿ, ರಿಷದ್ ಚೌಧರಿ, ಪ್ರಶಾಂತ್ ಭೂಷಣ್, ಕಪಿಲ್ ಸಿಬಲ್ ಸೇರಿದಂತೆ ಮತ್ತಿತರ ವಕೀಲರು ವಾದ ಮಂಡಿಸಿದರು.