ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ 62 ಸಾವಿರ, ದೆಹಲಿ 28 ಸಾವಿರಕ್ಕೂ ಅಧಿಕ.. ದೇಶದಲ್ಲಿ ಮೀತಿಮೀರಿದ ಕೊರೊನಾ ವೈರಸ್​! - Covid-19

ಡೆಡ್ಲಿ ವೈರಸ್ ಕೋವಿಡ್ ನಾಗಾಲೋಟ ದೇಶದಲ್ಲಿ ಜೋರಾಗಿದ್ದು, ದಿನದಿಂದ ದಿನಕ್ಕೆ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾಗುತ್ತಿರುವುದು ಆತಂಕ ಮೂಡಿಸಿದೆ.

Covid
Covid

By

Published : Apr 20, 2021, 10:41 PM IST

ನವದೆಹಲಿ: ಮಹಮಾರಿ ಕೊರೊನಾ ವೈರಸ್​ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡರೂ ಪ್ರಯೋಜನಕ್ಕೆ ಬರುತ್ತಿಲ್ಲ. ದೇಶದಲ್ಲಿ ದಿನದಿಂದ ದಿನಕ್ಕೆ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡು ಬರುತ್ತಿದ್ದು, ಇಂದು ಕೂಡ ಕೆಲವೊಂದು ರಾಜ್ಯಗಳಲ್ಲಿ ದಾಖಲೆಯ ಮಟ್ಟದಲ್ಲಿ ಕೋವಿಡ್ ಪ್ರಕರಣ ದಾಖಲಾಗಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 28,395 ಕೋವಿಡ್ ಕೇಸ್​ ಕಾಣಿಸಿಕೊಂಡಿದ್ದು, 277 ಜನರು ಸಾವನ್ನಪ್ಪಿದ್ದಾರೆ. ಸದ್ಯ 85,575 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಕೈಮೀರಿ ಹೋಗಿದ್ದು, ಕಳೆದ 24 ಗಂಟೆಯಲ್ಲಿ ದಾಖಲೆಯ 62,097 ಸೋಂಕಿತ ಪ್ರಕರಣ ದಾಖಲಾಗಿದ್ದು, 519 ಜನರು ಸಾವನ್ನಪ್ಪಿದ್ದಾರೆ. ಮುಂಬೈನಲ್ಲೇ 7,214 ಕೋವಿಡ್ ಪ್ರಕರಣ ಕಾಣಿಸಿಕೊಂಡಿದ್ದು, 35 ಜನರು ಸಾವನ್ನಪ್ಪಿದ್ದಾರೆ. ನಾಗ್ಪುರ್​ದಲ್ಲಿ 6,890 ಪ್ರಕರಣ ಪತ್ತೆಯಾಗಿವೆ.

ಕೇರಳದಲ್ಲಿ 19,577 ಪ್ರಕರಣ ದಾಖಲಾಗಿದ್ದು, ಕಳೆದ 24 ಗಂಟೆಯಲ್ಲಿ 28 ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡ್​ದಲ್ಲಿ 3,012 ಜನರಿಗೆ ಕೋವಿಡ್ ಸೋಂಕು ತಗುಲಿದ್ದು, 27 ಜನರು ಸಾವನ್ನಪ್ಪಿದ್ದಾರೆ. ಹಿಮಾಚಲ ಪ್ರದೇಶದಲ್ಲಿ 1,340 ಪ್ರಕರಣ, 16 ಸಾವು ಹಾಗೂ ಹರಿಯಾಣದಲ್ಲಿ 7,811 ಹೊಸ ಕೇಸ್ ದಾಖಲಾಗಿದ್ದು, 35 ಜನರು ಡೆಡ್ಲಿ ವೈರಸ್​ಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿಂದು ಬರೋಬ್ಬರಿ 21,794 ಜನರಿಗೆ‌ ಕೊರೊನಾ ದೃಢ : 149 ಮಂದಿ ಬಲಿ

ಕರ್ನಾಟಕದಲ್ಲೂ ಕೊರೊನಾ ವೈರಸ್​ ಹಾವಳಿ ಜೋರಾಗಿದ್ದು, ಕಳೆದ 24 ಗಂಟೆಯಲ್ಲಿ 21,794 ಕೋವಿಡ್​ ಪ್ರಕರಣ ದೃಢಪಟ್ಟಿದ್ದು, 149 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ABOUT THE AUTHOR

...view details