ಕರ್ನಾಟಕ

karnataka

ETV Bharat / bharat

ಕಬ್ಬು ಬೆಳೆಗಾರರಿಗೆ ಗುಡ್ ನ್ಯೂಸ್: ಪ್ರತಿ ಕ್ವಿಂಟಲ್‌ಗೆ ಇಷ್ಟೊಂದು ದರ ಹೆಚ್ಚಿಸಿದ ಮೋದಿ ಕ್ಯಾಬಿನೆಟ್! - ಕಬ್ಬು ಬೆಳೆಗಾರ

ಈ ಹಿಂದೆ ಪ್ರತಿ ಕ್ವಿಂಟಲ್‌ಗೆ 290 ರೂಪಾಯಿ ಇದ್ದ ಕಬ್ಬಿನ ದರ (ಎಫ್‌ಆರ್‌ಪಿ) ಈಗ ಕ್ವಿಂಟಲ್‌ಗೆ 305 ರೂಪಾಯಿಗೆ ಏರಿಕೆಯಾಗಿದೆ.

ಪ್ರತಿ ಕ್ವಿಂಟಲ್‌ಗೆ ಇಷ್ಟೊಂದು ದರ ಹೆಚ್ಚಿಸಿದ ಮೋದಿ ಕ್ಯಾಬಿನೆಟ್ !
ಪ್ರತಿ ಕ್ವಿಂಟಲ್‌ಗೆ ಇಷ್ಟೊಂದು ದರ ಹೆಚ್ಚಿಸಿದ ಮೋದಿ ಕ್ಯಾಬಿನೆಟ್ !

By

Published : Aug 3, 2022, 10:00 PM IST

ನವದೆಹಲಿ: ಕಬ್ಬು ಬೆಳೆಗಾರರ ​​ವಿಷಯದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ಕ್ವಿಂಟಲ್‌ಗೆ 305 ರೂ. ಎಫ್‌ಆರ್‌ಪಿ ನಿಗದಿ ಮಾಡಿದೆ. ಕಬ್ಬು ರೈತರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಮಾಡಿದೆ.

ಈ ಹಿಂದೆ ಪ್ರತಿ ಕ್ವಿಂಟಲ್‌ಗೆ 290 ರೂಪಾಯಿ ಇದ್ದ ಕಬ್ಬಿನ ದರ (ಎಫ್‌ಆರ್‌ಪಿ) ಈಗ ಕ್ವಿಂಟಲ್‌ಗೆ 305 ರೂಪಾಯಿಗೆ ಏರಿಕೆಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಸರ್ಕಾರ ಎಫ್‌ಆರ್‌ಪಿಯನ್ನು ಶೇ.34 ಕ್ಕಿಂತ ಹೆಚ್ಚು ಹೆಚ್ಚಿಸಿದೆ. ಇದರಿಂದ 5 ಕೋಟಿ ಕಬ್ಬು ಬೆಳೆಗಾರರು ಹಾಗೂ ದೇಶಾದ್ಯಂತ ಸಕ್ಕರೆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ.

ಕಬ್ಬು ಅರೆಯುವ ಅವಧಿಯು ಸಾಮಾನ್ಯವಾಗಿ ಅಕ್ಟೋಬರ್​ -ನವೆಂಬರ್‌ನಲ್ಲಿ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ ಮಧ್ಯದವರೆಗೆ ಮುಂದುವರಿಯುತ್ತದೆ. ಸರ್ಕಾರದ ಮೂಲಗಳ ಪ್ರಕಾರ, ಕಬ್ಬಿನ ಬೆಲೆ ಹೆಚ್ಚಳದ ಜೊತೆಗೆ, ಕೇಂದ್ರವು ಹೆಚ್ಚುವರಿ 1.2 ಮಿಲಿಯನ್ ಟನ್ (MT) ಸಕ್ಕರೆ ರಫ್ತಿಗೆ ಅವಕಾಶ ನೀಡಿದೆ. ಸೆಪ್ಟೆಂಬರ್ 2022ಕ್ಕೆ ಕೊನೆಗೊಳ್ಳುವ ಪ್ರಸಕ್ತ ಋತುವಿನಲ್ಲಿ ಉತ್ಪಾದನೆಯು ಅಂದಾಜು ದೇಶೀಯ ಉತ್ಪಾದನೆಯನ್ನು ಮೀರಿರುವುದರಿಂದ ಈ ನಿಯಮ ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಸಕ್ಕರೆ ರಫ್ತು ಮಾಡಲು ಅನುಕೂಲವಾಗುವಂತೆ, ಬಫರ್ ಸ್ಟಾಕ್‌ಗಳನ್ನು ನಿರ್ವಹಿಸಲು, ಎಥೆನಾಲ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ರೈತರ ಬಾಕಿಗಳನ್ನು ತೀರಿಸಲು ಸಕ್ಕರೆ ಕಾರ್ಖಾನೆಗಳಿಗೆ ₹18,000 ಕೋಟಿಗೂ ಹೆಚ್ಚು ಆರ್ಥಿಕ ಸಹಾಯವನ್ನು ವಿಸ್ತರಿಸಲಾಗಿದೆ. ಎಥೆನಾಲ್ ಉತ್ಪಾದನೆಗೆ ಹೆಚ್ಚುವರಿ ಸಕ್ಕರೆಯನ್ನು ನೀಡುವ ಉದ್ದೇಶದಿಂದ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸಲು ಸರ್ಕಾರ ಈ ಮೂಲಕ ಮುಂದಾಗಿದೆ.

ಇದನ್ನೂ ಓದಿ : ತಿರಂಗ ಜತೆ ಸಹೋದ್ಯೋಗಿ ಸಚಿವೆಯನ್ನು ಕಚೇರಿಗೆ ಡ್ರಾಪ್​ ಮಾಡಿದ ಸ್ಮೃತಿ ಇರಾನಿ: ವಿಡಿಯೋ ನೋಡಿ

ABOUT THE AUTHOR

...view details