ಹರಿದ್ವಾರ(ಉತ್ತರಾಖಂಡ) : ರೈಲು ಮಾರ್ಗದಲ್ಲಿ ಡಬಲ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಯ ವೇಳೆ ಪರೀಕ್ಷಾರ್ಥವಾಗಿ ಓಡಾಡುತ್ತಿದ್ದ ರೈಲು ಡಿಕ್ಕಿಯಾಗಿ ನಾಲ್ವರು ಮೃತಪಟ್ಟಿರುವ ಘಟನೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಜ್ವಾಲಾಪುರ ಕೊತ್ವಾಲಿ ಪ್ರದೇಶದ ಜಮಾಲ್ಪುರದಲ್ಲಿ ಘಟನೆ ಸಂಭವಿಸಿದ್ದು, ಹರಿದ್ವಾರ-ಲಕ್ಸಾರ್ ರೈಲ್ವೆ ಹಳಿಯ ಕಾಮಗಾರಿ ನಡೆಯುತ್ತಿದ್ದ ವೇಳೆ ಪರೀಕ್ಷಾರ್ಥವಾಗಿ ಓಡಾಡುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.