ಕರ್ನಾಟಕ

karnataka

ETV Bharat / bharat

ಕೊರೊನಾ ಸೆಂಟರ್​ನಲ್ಲಿ ಕಸ ಗುಡಿಸಿದ ಮಿನಿಸ್ಟರ್​.. ಯಾರಿವರು? - Mizoram sets new high led by minister

ಮಂತ್ರಿಯು ಈ ರೀತಿ ಕಸ ಗುಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪಚ್ಚುಂಗಾ ಕಾಲೇಜಿನ ಪ್ರೊಫೆಸರ್ ಎಲ್​.ಹೆಚ್​. ಚುನಾನಾವ್ಮಾ, ಕೊಠಡಿಯನ್ನು ಸ್ವಚ್ಛಗೊಳಿಸಲು ಸ್ವೀಪರ್ ಹಿಂದೇಟು ಹಾಕಿದ ಕಾರಣ ಸಚಿವರೇ ನೆಲ ಸ್ವಚ್ಛಗೊಳಿಸಿದ್ದಾರೆ..

ಮಿನಿಸ್ಟ
ಮಿನಿಸ್ಟ

By

Published : May 15, 2021, 9:40 PM IST

ನವದೆಹಲಿ :ಆಸ್ಪತ್ರೆಯೊಂದರಲ್ಲಿ ಮಿಜೋರಾಂ ಮಂತ್ರಿಯೊಬ್ಬರು ಕೋವಿಡ್ ಸೋಂಕಿತರ ಸೇವೆ ಮಾಡುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.

ಪವರ್ ಮಿನಿಸ್ಟರ್ ಆಗಿರುವ ಆರ್.ಲಾಲ್​​​​​​​ಜರ್ಲಿಯಾನಾ ಕೋವಿಡ್ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿ, ಸೋಂಕಿತರ ಆರೋಗ್ಯ ವಿಚಾರಿಸಿದರು. ಜತೆಗೆ ನೆಲ ಗುಡಿಸಿ ಸ್ವಚ್ಛಗೊಳಿಸಿರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಂತ್ರಿಯು ಈ ರೀತಿ ಕಸ ಗುಡಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪಚ್ಚುಂಗಾ ಕಾಲೇಜಿನ ಪ್ರೊಫೆಸರ್ ಎಲ್​.ಹೆಚ್​. ಚುನಾನಾವ್ಮಾ, ಕೊಠಡಿಯನ್ನು ಸ್ವಚ್ಛಗೊಳಿಸಲು ಸ್ವೀಪರ್ ಹಿಂದೇಟು ಹಾಕಿದ ಕಾರಣ ಸಚಿವರೇ ನೆಲ ಸ್ವಚ್ಛಗೊಳಿಸಿದ್ದಾರೆ ಎಂದರು.

ಸಾಮಾನ್ಯವಾಗಿ ಸಚಿವರು, ನಿತ್ಯ ಮನೆಯಲ್ಲಿ ಇದೇ ರೀತಿಯ ಕೆಲಸವನ್ನು ಮಾಡುತ್ತಾರೆಂದು ವರದಿಯಾಗಿದೆ. ಲಾಲ್​​​​​​​ಜರ್ಲಿಯಾನಾ ಅವರ ಪತ್ನಿ ಹಾಗೂ ಮಗನಿಗೂ ಕೋವಿಡ್ ದೃಢಪಟ್ಟಿದ್ದು, ರಾಜಧಾನಿ ಐಜಾಲ್​ನಿಂದ 14 ಕಿ.ಲೋ ಮೀಟರ್ ದೂರದಲ್ಲಿರುವ ಫಾಲ್ಕಾವ್​ನ ಜೊರಾಮ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ.

ABOUT THE AUTHOR

...view details