ನ್ಯೂಯಾರ್ಕ್: ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬೈಡನ್ ಕಳೆದ ತಿಂಗಳು ಕ್ವಾಡ್ ಶೃಂಗಸಭೆಯಲ್ಲಿನ ಸಹಕಾರಕ್ಕಾಗಿ ಕಾರ್ಯಸೂಚಿ ಮುಂದುವರಿಸಲು ಉನ್ನತ ಮಟ್ಟದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ.
ಈ ಹಂತದಲ್ಲಿ ರಾಜ್ಯ ಕಾರ್ಯದರ್ಶಿ ಮತ್ತು ವಿದೇಶಾಂಗ ಇಲಾಖೆಯ ನಾಯಕರು ಅಥವಾ ನಮ್ಮ ರಾಷ್ಟ್ರೀಯ ಭದ್ರತಾ ತಂಡದ ನಾಯಕರಾಗಿರಲಿ, ಉನ್ನತ ಮಟ್ಟದ ಸಂವಾದಕರ ಮೂಲಕ ಕೆಲಸ ಮಾಡುವುದನ್ನು ಮುಂದುವರಿಸುವತ್ತ ಗಮನ ಹರಿಸಲಾಗುವುದು. ಆರ್ಥಿಕ ಭದ್ರತೆ, ರಾಷ್ಟ್ರೀಯ ಭದ್ರತೆ, ಕೋವಿಡ್ಗೆ ಪರಿಹಾರ ಮತ್ತು ಸಾಂಕ್ರಾಮಿಕ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸಹ ಇದರಲ್ಲಿ ಸೇರಿದೆ ಎಂದು ಜೆನ್ ಸಾಕಿ ಶುಕ್ರವಾರ ಹೇಳಿದ್ದಾರೆ.
ಎರಡು ದೇಶಗಳ ಅಧಿಕಾರಿಗಳ ನಡುವೆ ನಡೆದ ಮತ್ತು ನಿಗದಿಯಾಗಿರುವ ಹಲವು ಸಭೆಗಳ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ಸಾಕಿ, ದ್ವಿಪಕ್ಷೀಯ ಸಭೆ ಮತ್ತು ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಸ್ಕಾಟ್ ಮಾರಿಸನ್ ಮತ್ತು ಯೋಶಿಹೈಡೆ ಸುಗಾ ಅವರೊಂದಿಗೆ ನಡೆದ ಕ್ವಾಡ್ ಶೃಂಗಸಭೆ ಬಗ್ಗೆಯೂ ಮಾತನಾಡಿದ್ರು.
ಭದ್ರತೆ, ವ್ಯಾಪಾರ ಮತ್ತು ಕೋವಿಡ್ ಲಸಿಕೆಗಳನ್ನು ಒದಗಿಸುವ ಕ್ವಾಡ್‌ನೊಂದಿಗೆ ಸಹಕಾರದ ಕುರಿತು ಉಭಯ ದೇಶಗಳ ನಡುವೆ ಸಹಕಾರ ಹೆಚ್ಚುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮುಂದಿನ ವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳಲ್ಲಿ ಪಾಲ್ಗೊಳ್ಳಲು ಅಮೆರಿಕಕ್ಕೆ ಭೇಟಿ ನೀಡಲಿದ್ದು, ಅಮೆರಿಕದ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಭಯೋತ್ಪಾದನೆ ವಿರುದ್ಧ ಭಾರತ - ಯುಎಸ್ ಜಂಟಿ ಕಾರ್ಯಕಾರಿ ಗುಂಪು ಈ ತಿಂಗಳ ಕೊನೆಯ ವಾರದಲ್ಲಿ ಸಭೆ ಸೇರಲಿದೆ. ಈ ಸಭೆಯಲ್ಲಿ ಜೈಶಂಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ನಡುವಿನ 2+2 ಸಂವಾದಕ್ಕೆ ಕಾರಣವಾಗಲಿದೆ.