ಹೈದರಾಬಾದ್:ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ರಾವ್ ಅವರ ನಿವಾಸ ಪ್ರಗತಿ ಭವನದ ಮುಂದೆ ಹೈಡ್ರಾಮಾವೇ ನಡೆದಿದೆ. ಸಿಎಂ ನಿವಾಸಕ್ಕೆ ಘೇರಾವ್ ಹಾಕಲು ಮುಂದಾದಾಗ ಆಂಧ್ರಪ್ರದೇಶದ ಸಿಎಂ ಜಗನ್ಮೋಹನ್ರೆಡ್ಡಿ ಅವರ ಸಹೋದರಿ, ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಅವರನ್ನು ಪೊಲೀಸರು ಬಂಧಿಸಿದರು. ಇದನ್ನು ಖಂಡಿಸಿ ಅವರ ಬೆಂಬಲಿಗರು ಸಿಎಂ ನಿವಾಸದ ಕಟ್ಟಡ, ಗೋಡೆ ಹತ್ತಿ ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ.
ತೆಲಂಗಾಣ ಸಿಎಂ ಮನೆ ಮುಂದೆ ತೀವ್ರ ಪ್ರತಿಭಟನೆ, ಆಂಧ್ರ ಸಿಎಂ ಸಹೋದರಿ ಶರ್ಮಿಳಾ ಮತ್ತೆ ಬಂಧನ - ಬೆಂಬಲಿಗರು ತೀವ್ರ ಪ್ರತಿಭಟನೆ
ತೆಲಂಗಾಣ ಸಿಎಂ ಅಧಿಕೃತ ನಿವಾಸದ ಮುಂದೆ ವೈಎಸ್‌ಆರ್‌ಟಿಪಿ ಮುಖ್ಯಸ್ಥೆ ವೈಎಸ್ ಶರ್ಮಿಳಾ ಮತ್ತು ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಅವರನ್ನು ಬಂಧಿಸಲಾಗಿದೆ.
ಆಂಧ್ರ ಸಿಎಂ ಸಹೋದರಿ ಶರ್ಮಿಳಾ ಮತ್ತೆ ಬಂಧನ
ತೆಲಂಗಾಣ ಸರ್ಕಾರದ ವಿರುದ್ಧ ಶರ್ಮಿಳಾ ಅವರು ಪಾದಯಾತ್ರೆ ನಡೆಸುತ್ತಿದ್ದು, ನಿನ್ನೆ ಅವರ ಕಾರಿನ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) ಕಾರ್ಯಕರ್ತರು ದಾಳಿ ಮಾಡಿ ಬೆಂಕಿ ಹಚ್ಚಿದ್ದರು. ಅಲ್ಲದೇ, ಶರ್ಮಿಳಾ ಅವರು ಒಳಗಿದ್ದಾಗಲೇ ಟೋಯಿಂಗ್ ವಾಹನ ಬಳಸಿ ಕಾರನ್ನು ಎಳೆದೊಯ್ದಿದ್ದರು. ಇದು ವೈಎಸ್‌ಆರ್‌ಟಿಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ಕೂಡ ತೆಲಂಗಾಣ ಪೊಲೀಸರು ಶರ್ಮಿಳಾ ಅವರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಿದ್ದರು.
ಓದಿ:ಆಂಧ್ರ ಸಿಎಂ ಸಹೋದರಿಯ ಕಾರನ್ನು ಟೋಯಿಂಗ್ ಮಾಡಿದ ತೆಲಂಗಾಣ ಪೊಲೀಸ್