ಕರ್ನಾಟಕ

karnataka

ETV Bharat / bharat

ಪಠಾಣ್​ಕೋಟ್​ನಲ್ಲಿ ಹೈ ಅಲರ್ಟ್​.. ಉಗ್ರರ ದಾಳಿ ಭೀತಿ ಹಿನ್ನೆಲೆ ಭಾರಿ ಭದ್ರತೆ

ಕೆಲ ದಿನಗಳ ಹಿಂದೆ ಪಠಾಣ್​ಕೋಟ್​​ನಲ್ಲಿ ಗ್ರೆನೆಡ್​ ದಾಳಿ ಮಾಡಲಾಗಿತ್ತು. ಕೈನಿಂದ ಗ್ರನೇಡ್​​ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ಪಠಾಣ್​​​ಕೋಟ್​​ನಲ್ಲಿ ಭಾರಿ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ.

ಪಠಾಣ್​ಕೋಟ್​ನಲ್ಲಿ ಹೈ ಅಲರ್ಟ್​..ಉಗ್ರರ ದಾಳಿ ಭೀತಿ ಹಿನ್ನೆಲೆ ಭಾರಿ ಭದ್ರತೆ
high-alert-sounded-in-pathankot-security-beefed-up

By

Published : Nov 29, 2021, 9:21 AM IST

ಪಠಾಣ್​ಕೋಟ್​​(ಪಂಜಾಬ್​):ಕೆಲವು ದಿನಗಳ ಹಿಂದೆ ಸೇನಾ ನೆಲೆಯ ಗೇಟ್‌ನ ಹೊರಗೆ ಹ್ಯಾಂಡ್ ಗ್ರೆನೇಡ್ ದಾಳಿ ಮಾಡಲಾಗಿತ್ತು. ಈ ದಾಳಿಯ ಬಳಿಕ ಪಠಾಣ್‌ಕೋಟ್‌ನಲ್ಲಿ ಉಗ್ರರು ದಾಳಿ ಮಾಡುವ ಶಂಕೆ ವ್ಯಕ್ತವಾಗಿದ್ದು, ಈ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಸುಮಾರು 500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಪಠಾಣ್‌ಕೋಟ್ ಎಸ್‌ಎಸ್‌ಪಿ ಸುರೀಂದರ್ ಲಂಬಾ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ವೇಳೆ ಭದ್ರತೆ ಹೆಚ್ಚಿಸಲಾಗಿದ್ದು, ಪೊಲೀಸ್‌ ಚೆಕ್‌ಪೋಸ್ಟ್‌ಗಳಲ್ಲಿ ಹದ್ದಿನ ಕಣ್ಣಿಡಲಾಗಿದ್ದು, ನಿರಂತರವಾಗಿ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್‌ಎಸ್‌ಪಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಭಲೇ ಜಡ್ಜ್​.. ಒಂದೇ ದಿನದಲ್ಲಿ ರೇಪ್​ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸದ ಪಠಾಣ್‌ಕೋಟ್ ಎಸ್‌ಎಸ್‌ಪಿ, ಪೊಲೀಸರು ವಿವಿಧ ಸ್ಥಳಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ ಎಂದು ಹೇಳಿದರು. ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ 100 ಕಮಾಂಡೋಗಳನ್ನು ನಿಯೋಜಿಸಲಾಗಿದ್ದು ಭಾರಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.

ABOUT THE AUTHOR

...view details